ಕಲ್ಪಲ್ಲಿ ಸ್ಮಶಾನ : ಕರ್ನಾಟಕದ ಬೆಂಗಳೂರಿನ ಕಲ್ಪಲ್ಲಿ ಸ್ಮಶಾನವು ಭಯಾನಕ ತಾಣವಾಗಿದೆ. ಇಲ್ಲಿಗೆ ಹಗಲಿನಲ್ಲಿಯೇ ಜನರು ಹೋಗಲು ಹೆದರುತ್ತಾರೆ. ಇಲ್ಲಿನ ಸ್ಥಳೀಯರು ಹೇಳುವಂತೆ ಇಲ್ಲಿ ರಾತ್ರಿಯ ವೇಳೆ ಯಾರೋ ಅಳುವುದು, ನಗುವುದು ಹಾಗೂ ಹಾಡುವುದು ಕೇಳಿಸುತ್ತದೆಯಂತೆ. ಸಂಜೆಯಾಗುತ್ತಿದ್ದಂತೆ ಸಮಾಧಿಯ ಸುತ್ತ ಬಿಳಿ ಬಟ್ಟೆ ಧರಿಸಿದ ಆತ್ಮವೊಂದು ಸುತ್ತಾಟವುದನ್ನು ಕೆಲವರು ನೋಡಿದ್ದಾರೆ ಎನ್ನಲಾಗಿದೆ.
ವಿಕ್ಟೋರಿಯಾ ಹಾಸ್ಪಿಟಲ್ : ಈ ಆಸ್ಪತ್ರೆಯು ಭಯಾನಕ ಸ್ಥಳವಾಗಿದೆಯಂತೆ. ರಾತ್ರಿಯ ವೇಳೆ ಆಸ್ಪತ್ರೆಯ ಆವರಣದಲ್ಲಿನ ಮರವೊಂದರಲ್ಲಿ ಆತ್ಮವನ್ನು ನೋಡಿದವರು ಇದ್ದಾರೆ. ಇಲ್ಲಿ ಆಹಾರ ಪ್ಯಾಕೇಟ್ಗಳು ಮಿಸ್ ಆಗಿರುವ ಕಾರಣ ಹಸಿದ ಪ್ರೇತಾತ್ಮದ ಕಾಟವೇ ಎಂದು ಇಲ್ಲಿಯವರು ನಂಬುತ್ತಾರೆ
ಎಂ ಜಿ ರಸ್ತೆಯ ಕಾಲ್ ಸೆಂಟರ್ : ಈ ರಸ್ತೆ ಪ್ರಸಿದ್ಧ ಸ್ಥಳವಾಗಿರುವುದಲ್ಲದೆ, ಭಯಾನಕ ಸ್ಥಳವು ಕೂಡ. ಕೆಲವು ವರ್ಷಗಳ ಹಿಂದೆ ಈ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಕುಡಿದ ಮತ್ತಿನಲ್ಲಿದ್ದ ಚಾಲಕನ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಳು. ಅಪಘಾತದ ವೇಳೆ ಸಹಾಯಕ್ಕಾಗಿ ಅಳುತ್ತಿದ್ದಂತೆ, ಕೊನೆಗೆ ಯಾರು ಬಾರದ ಕಾರಣ ಅಲ್ಲೇ ಮೃತ ಪಟ್ಟಿದ್ದಳಂತೆ ಎನ್ನಲಾಗಿದೆ. ಇಂದಿಗೂ ಆಕೆಯ ಆತ್ಮವು ಇಲ್ಲೇ ಇದೆಯಂತೆ. ರಾತ್ರಿಯ ವೇಳೆ ಕಾಲ್ ಸೆಂಟರ್ ಮೂಲಕ ಹಾದು ಹೋಗುವ ಜನರಿಗೆ, ಮಹಿಳೆಯ ಕಿರುಚಾಟವು ಕೇಳಿಸಿದ್ದು, ಭಯ ಅನುಭವವಾಗಿದೆ
ಉಡುಪಿಯ ದೆವ್ವದ ಮನೆ : ಉಡುಪಿಯ ಈ ಭಯಾನಕ ಸ್ಥಳ ಇರುವುದು ಪರ್ಕಳದ ಮಂಜುನಾಥನಗರದಲ್ಲಿ. ಹಲವು ವರ್ಷಗಳ ಹಿಂದೆ ಒಂದೊಳ್ಳೆ ಹೆಸರು ಹಾಗೂ ಸ್ಥಾನಮಾನ ಹೊಂದಿದ್ದ ವ್ಯಕ್ತಿಯೊಬ್ಬರು ತಮ್ಮ ಮಗನ ಹೆಸರು ಅಪರಾಧ ಕ್ಷೇತ್ರದಲ್ಲಿ ಬಂದಿತ್ತು ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರಂತೆ. ಅಂದಿನಿಂದ ಈ ಪ್ರದೇಶದಲ್ಲಿ ಅವರ ಆತ್ಮವು ಅಲೆದಾಡುತ್ತಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಇವತ್ತಿಗೂ ಈ ಪ್ರದೇಶದ ಸುತ್ತ ಯಾರು ಕೂಡ ಹೋಗುವುದಿಲ್ಲವಂತೆ. ಇಲ್ಲಿಗೆ ಭೇಟಿ ನೀಡುವವರ ಗುಂಡಿಗೆ ಗಟ್ಟಿಯಿರಲೇಬೇಕು.
ಬಿಜಾಪುರದ ಸಮಾಧಿಗಳ ಬಾವಿ : ಐತಿಹಾಸಿಕ ಉಲ್ಲೇಖದಂತೆ ಅಫ್ಜಲ್ ಖಾನ್ ತನ್ನ 63 ಪತ್ನಿಯರನ್ನು ಸಾಥ್ ಕಬರ್ ಬಳಿ ಇರುವ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇಂದಿಗೂ ಕೂಡ ರಾತ್ರಿಯ ವೇಳೆ ಈ ಬಾವಿಯಿಂದ ಶಬ್ಧವು ಕೇಳಿಸುತ್ತದೆಯಂತೆ. ಇಲ್ಲಿ ದೆವ್ವಗಳಿವೆ ಎನ್ನಲಾಗಿದ್ದು, ಹೀಗಾಗಿ ಇದೊಂದು ಭಯಾನಕ ಸ್ಥಳವಾಗಿದೆ.
Published On - 9:38 am, Wed, 26 June 24