MS Dhoni: ನಟ ವಿಜಯ್ ಹಾಗೂ ಎಂಎಸ್ ಧೋನಿ ಭೇಟಿ ಹೇಗಿತ್ತು?; ವಿವರಿಸುತ್ತವೆ ಈ ಚಿತ್ರಗಳು
Thalapathy Vijay: ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈನ ಸ್ಟುಡಿಯೊ ಒಂದರಲ್ಲಿ ಅನಿರೀಕ್ಷಿತ ಭೇಟಿಯಾಗಿದ್ದಾರೆ. ಅವರ ಭೇಟಿಯ ಫೊಟೊಗಳು ಇಲ್ಲಿವೆ.
Updated on:Aug 13, 2021 | 12:35 PM

MS Dhoni meets Thalapathy Vijay meet in Chennai during Beast film shoot

MS Dhoni meets Thalapathy Vijay meet in Chennai during Beast film shoot

ನಟ ದಳಪತಿ ವಿಜಯ್ ಅವರು ‘ಬೀಸ್ಟ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅದೇ ಸ್ಟುಡಿಯೋದಲ್ಲಿ ಧೋನಿ ಅವರು ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಒಂದೇ ಸ್ಟುಡಿಯೋದಲ್ಲಿ ತಾವಿಬ್ಬರೂ ಇದ್ದಿದ್ದರಿಂದ ಭೇಟಿಯಾದರು ಎನ್ನಲಾಗಿದೆ.

ಎಂ.ಎಸ್. ಧೋನಿ ಅವರಿಗೆ ಚೆನ್ನೈ ಮೇಲೆ ವಿಶೇಷ ಒಲವು. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರು ಹಲವು ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ. ಆ ಕಾರಣದಿಂದ ಅವರಿಗೆ ಚೆನ್ನೈ ಎಂದರೆ ಎರಡನೇ ಮನೆ ಇದ್ದಂತೆ ಎಂದು ಅವರುಈ ಹಿಂದೆ ಹೇಳಿಕೊಂಡಿದ್ದರು.

ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ಧೋನಿ ರಾಯಭಾರಿ ಆಗಿದ್ದಾರೆ. ಆ ಕಾರಣಕ್ಕಾಗಿ ಅವರು ಹಲವು ಜಾಹೀರಾತುಗಳಲ್ಲಿ ನಟಿಸುತ್ತಿರುತ್ತಾರೆ. ಇತ್ತೀಚೆಗೆ ಅವರ ಹೊಸ ಹೇರ್ಸ್ಟೈಲ್ ಸಖತ್ ವೈರಲ್ ಆಗಿತ್ತು. (ಚಿತ್ರ ಕೃಪೆ: ಭಾರತ ಕ್ರಿಕೆಟ್ ತಂಡದ ಟ್ವಿಟರ್ ಖಾತೆ)
Published On - 12:35 pm, Fri, 13 August 21



















