ಅತ್ಯುತ್ತಮ ನಟ-ನಟಿ ‘ರಾಷ್ಟ್ರ ಪ್ರಶಸ್ತಿ’ ಪಡೆದ ಕನ್ನಡದ ಪ್ರತಿಭಾವಂತ ಕಲಾವಿದರು ಇವರು..

|

Updated on: Aug 16, 2024 | 6:52 PM

ರಾಷ್ಟ್ರ ಪ್ರಶಸ್ತಿ ಪಡೆಯಬೇಕು ಎಂಬ ಆಸೆ ಬಹುತೇಕ ಎಲ್ಲ ಕಲಾವಿದರಿಗೆ ಇರುತ್ತದೆ. ಆದರೆ ಅಂಥ ಸಾಧನೆ ಸಾಧ್ಯವಾಗುವುದು ಕೆಲವರಿಗೆ ಮಾತ್ರ. ಪ್ರತಿ ವರ್ಷ ನ್ಯಾಷನಲ್​ ಅವಾರ್ಡ್​ ಘೋಷಣೆ ಆದಾಗ ಕನ್ನಡ ಚಿತ್ರರಂಗಕ್ಕೆ ಎಷ್ಟು ಪ್ರಶಸ್ತಿ ಬಂತು ಎಂಬುದನ್ನು ಕುತೂಹಲದಿಂದ ನೋಡುತ್ತಾರೆ ಕನ್ನಡಿಗರು. ಈವರೆಗೂ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದ ಸ್ಯಾಂಡಲ್​ವುಡ್​ ಕಲಾವಿದರ ಬಗ್ಗೆ ಮಾಹಿತಿ ಇಲ್ಲಿದೆ..

1 / 8
1973ರಲ್ಲಿ ಕನ್ನಡದ ನಟಿ ನಂದಿನಿ ಭಕ್ತವತ್ಸಲ ಅವರು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದರು. ‘ಕಾಡು’ ಸಿನಿಮಾದಲ್ಲಿನ ಅವರ ನಟನೆಗೆ ಈ ಅವಾರ್ಡ್​ ಲಭಿಸಿತು. ಶ್ರೀಕೃಷ್ಣ ಆಲನಹಳ್ಳಿ ಬರೆದ ‘ಕಾಡು’ ಕಾದಂಬರಿಯನ್ನು ಆಧರಿಸಿ ಸಿದ್ಧವಾದ ಆ ಸಿನಿಮಾಗೆ ಗಿರೀಶ್ ಕಾರ್ನಾಡ್​ ಅವರ ನಿರ್ದೇಶನವಿದೆ.

2 / 8
ಎಂ.ವಿ. ವಾಸುದೇವ ರಾವ್​ ಅವರು 1975ರಲ್ಲಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದರು. ಬಿ.ವಿ. ಕಾರಂತ್​ ಅವರು ನಿರ್ದೇಶನ ಮಾಡಿದ ‘ಚೋಮನ ದುಡಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಎಂ.ವಿ. ವಾಸುದೇವ ರಾವ್​ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತು. ಇದು ಶಿವರಾಮ ಕಾರಂತರ ಕಾದಂಬರಿ ಆಧಾರಿತ ಸಿನಿಮಾ.

3 / 8
1986ರಲ್ಲಿ ನಟ ಚಾರುಹಾ​ಸನ್ ಅವರು ‘ತರಬನ ಕಥೆ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಪಡೆದುಕೊಂಡರು. ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಗಿರೀಶ್​ ಕಾಸರವಳ್ಳಿ. ಮೂಲತಃ ತಮಿಳು ಚಿತ್ರರಂಗದ ನಟರಾದ ಚಾರುಹಾಸನ್​​ ಅವರು ಕನ್ನಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

4 / 8
2004ರಲ್ಲಿ ನಟಿ ತಾರಾ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಲಭಿಸಿತು. ಗಿರೀಶ್​ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ‘ಹಸೀನಾ’ ಚಿತ್ರಕ್ಕಾಗಿ ತಾರಾ ಅವರು ಈ ಪ್ರಶಸ್ತಿ ಪಡೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ತಾರಾ ಅವರು ತಮ್ಮದೇ ಛಾಪು ಮೂಡಿಸಿ, ಬೇಡಿಕೆಯ ಕಲಾವಿದೆ ಆಗಿದ್ದಾರೆ.

5 / 8
ಕನ್ನಡದ ಮತ್ತೋರ್ವ ಪ್ರತಿಭಾವಂತ ನಟಿ ಉಮಾಶ್ರೀ ಅವರು ಕೂಡ ‘ಅತ್ಯುತ್ತಮ ನಟಿ’ ನ್ಯಾಷನಲ್​ ಅವಾರ್ಡ್​​ ಪಡೆದಿದ್ದಾರೆ. ಗಿರೀಶ್​ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ‘ಗುಲಾಬಿ ಟಾಕೀಸ್​’ ಚಿತ್ರದಲ್ಲಿನ ಅಭಿನಯಕ್ಕಾಗಿ 2007ರಲ್ಲಿ ಉಮಾಶ್ರೀ ಅವರಿಗೆ ಈ ಪ್ರಶಸ್ತಿ ಸಿಕ್ಕಿತು.

6 / 8
2014ರಲ್ಲಿ ನಟ ಸಂಚಾರಿ ವಿಜಯ್​ ಅವರು ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ‘ಬೆಸ್ಟ್​ ಆ್ಯಕ್ಟರ್​’ ನ್ಯಾಷನಲ್ ಅವಾರ್ಡ್​ ಪಡೆದುಕೊಂಡರು. ತೃತೀಯ ಲಿಂಗಿಯ ಪಾತ್ರದಲ್ಲಿ ಅವರ ನಟನೆ ಎಲ್ಲರ ಮೆಚ್ಚುಗೆ ಪಡೆಯಿತು. ಬಿ.ಎಸ್​. ಲಿಂಗದೇವರು ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

7 / 8
2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಿಷಬ್​ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. 2024ರ ಆಗಸ್ಟ್​ 16ರಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ರಿಷಬ್​ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದಾರೆ.

8 / 8
ಈ ಕಲಾವಿದರು ಮಾತ್ರವಲ್ಲದೇ ‘ಸ್ಪೆಷಲ್​ ಮೆನ್ಷನ್​ ಅವಾರ್ಡ್​​’, ‘ಸ್ಪೆಷಲ್​ ಜ್ಯೂರಿ ಅವಾರ್ಡ್​’ ವಿಭಾಗಗಳಲ್ಲಿ ಜಯಮಾಲಾ (1997), ಎಚ್​.ಜಿ. ದತ್ತಾತ್ರೆಯ (2003, 2012), ಶ್ರುತಿ ಹರಿಹರನ್​ (2018) ಅವರು ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಕನ್ನಡ ಚಿತ್ರರಂಗದ ಗರಿಮೆ ಹೆಚ್ಚಿಸಿದ್ದಾರೆ.