ನಟಿ ನಯನಾತಾರಾ ಹಾಗೂ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಅವರು ಕುಟುಂಬದ ಸಮ್ಮುಖದಲ್ಲಿ ಹಸೆಮಣೆ ಏರಿದರು. ಬಾಡಿಗೆ ತಾಯ್ತನದ ಮೂಲಕ ಈ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ಫೋಟೋಗಳನ್ನು ಆಗಾಗ ಹಂಚಿಕೊಳ್ಳಲಾಗುತ್ತದೆ.
ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಲ್ಲ. ಅವರ ಪತ್ನಿ ವಿಘ್ನೇಶ್ ಅವರು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಅಭಿಮಾನಿಗಳಿಗಾಗಿ ಅವರು ಆಗಾಗ ಫ್ಯಾಮಿಲಿ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಈಗ ನಯನತಾರಾ ಅವರ ಹೊಸ ಫೋಟೋಸ್ ವೈರಲ್ ಆಗಿದೆ. ಓಣಂ ಸಂಭ್ರಮದಲ್ಲಿ ಅವರ ಕುಟುಂಬ ಇದೆ. ಮಕ್ಕಳ ಜೊತೆ ಹಬ್ಬದ ಊಟವನ್ನು ಸವಿದಿದ್ದಾರೆ ನಯನತಾರಾ ಹಾಗೂ ವಿಘ್ನೇಶ್ ಶಿವನ್. ಈ ಫೋಟೋಗಳನ್ನು ವೀಘ್ನೇಶ್ ಹಂಚಿಕೊಂಡಿದ್ದಾರೆ.
‘ಉಯಿರ್ ಹಾಗೂ ಉಳಗಮ್ ಜೊತೆ ಮೊದಲ ಓಣಂ. ಇಲ್ಲಿ ಹಬ್ಬ ಬೇಗ ಆರಂಭ ಆಗಿದೆ. ಎಲ್ಲರಿಗೂ ಮುಂಚಿತವಾಗಿ ಓಣಂ ಹಬ್ಬದ ಶುಭಾಶಯ’ ಎಂದು ವಿಘ್ನೇಶ್ ಶಿವನ್ ಬರೆದುಕೊಂಡಿದ್ದಾರೆ. ಎಲ್ಲರೂ ದಂಪತಿಗೆ ಶುಭಾಶಯ ಕೋರಿದ್ದಾರೆ.
ವಿಘ್ನೇಶ್ ಶಿವನ್ ಅವರು ಪತ್ನಿ ಹಾಗೂ ಮಕ್ಕಳ ಜೊತೆ ಇರುವ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತದೆ. ನಯನತಾರಾ ಕೂಡ ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಲಿ ಅನ್ನೋದು ಅಭಿಮಾನಿಗಳ ಆಸೆ.
ನಯನತಾರಾ ಹಾಗೂ ವಿಘ್ನೇಶ್ ಕಳೆದ ವರ್ಷ ಜೂನ್ 9ರಂದು ಮದುವೆ ಆದರು. ಶಾರುಖ್ ಖಾನ್, ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಇವರ ಮದುವೆಗೆ ಹಾಜರಿ ಹಾಕಿ ಶುಭಕೋರಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿತ್ತು.
ಸದ್ಯ ನಯನತಾರಾ ಅವರು ‘ಜವಾನ್’ ಸಿನಿಮಾ ರಿಲೀಸ್ಗಾಗಿ ಕಾದಿದ್ದಾರೆ. ಸೆಪ್ಟೆಂಬರ್ 7ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಶಾರುಖ್ ಖಾನ್ ಅವರು ಈ ಚಿತ್ರಕ್ಕೆ ಹೀರೋ. ಅಟ್ಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
Published On - 9:26 am, Mon, 28 August 23