- Kannada News Photo gallery Nikhil Siddhartha And Iswarya Menon land in Bengaluru to Promote Spy Movie
‘ಸ್ಪೈ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದ ನಿಖಿಲ್ ಸಿದ್ದಾರ್ಥ್-ಐಶ್ವರ್ಯಾ ಮೆನನ್; ಇಲ್ಲಿದೆ ಫೋಟೋಸ್
ನಿಖಿಲ್ ಸಿದ್ದಾರ್ಥ್ ಹಾಗೂ ಐಶ್ವರ್ಯಾ ಅವರು ಮುಂಬೈನಲ್ಲಿ ಪ್ರಮೋಷನ್ ಮುಗಿಸಿದ್ದಾರೆ. ಈಗ ಇವರು ಬೆಂಗಳೂರಿಗೆ ಬಂದಿಳಿದಿದೆ.
Updated on: Jun 26, 2023 | 11:35 AM

ಟಾಲಿವುಡ್ ನಟ ನಿಖಿಲ್ ಸಿದ್ದಾರ್ಥ್ ಹಾಗೂ ಐಶ್ವರ್ಯಾ ಮೆನನ್ ಅವರು ‘ಸ್ಪೈ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 29ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ.

ಇತ್ತೀಚೆಗೆ ನಿಖಿಲ್ ಸಿದ್ದಾರ್ಥ್ ಹಾಗೂ ಐಶ್ವರ್ಯಾ ಅವರು ಮುಂಬೈನಲ್ಲಿ ಪ್ರಮೋಷನ್ ಮುಗಿಸಿದ್ದಾರೆ. ಈಗ ಈ ತಂಡ ಬೆಂಗಳೂರಿಗೆ ಬಂದಿಳಿದಿದೆ.

ನಟ ನಿಖಿಲ್ ಸಿದ್ದಾರ್ಥ್, ನಾಯಕಿ ಐಶ್ವರ್ಯಾ ಮೆನನ್ ಬೆಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಿದ್ದಂತೆ ಫ್ಯಾನ್ಸ್ ಸೆಲ್ಫಿಗೆ ಮುಗಿಬಿದ್ದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರವನ್ನು ‘ಸ್ಪೈ’ ಸಿನಿಮಾ ಹೊಂದಿದೆ. ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಗ್ಯಾರಿ ಬಿ.ಎಚ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ಎವರು’ ಮತ್ತು ‘ಹಿಟ್’ ಸಿನಿಮಾಗಳನ್ನು ನೀಡಿದ ನಿರ್ಮಾಪಕ ಕೆ.ರಾಜಶೇಖರ್ ರೆಡ್ಡಿ, ಚರಣ್ ರಾಜ್ ಉಪ್ಪಲಪತಿ ಚಿತ್ರ ನಿರ್ಮಿಸಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ‘ಕಾರ್ತಿಕೇಯ 2’ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದ ಮೂಲಕ ನಿಖಿಲ್ ಅವರ ಜನಪ್ರಿಯತೆ ಹೆಚ್ಚಿದೆ.




