- Kannada News Photo gallery Nikki Galrani and Aadhi Pinisetty Wedding Photos Nani and other celebrities Attend marriage
ನಿಕ್ಕಿ ಗಲ್ರಾನಿ-ಆದಿ ಮದುವೆಯಲ್ಲಿ ಹಾಜರಿ ಹಾಕಿದ ಸೆಲೆಬ್ರಿಟಿಗಳು; ಇಲ್ಲಿದೆ ಫೋಟೋ ಗ್ಯಾಲರಿ
ನಿಕ್ಕಿ ಮತ್ತು ಆದಿ ಈ ಮೊದಲಿನಿಂದಲೂ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಅವರು ಆಗಾಗ ಒಟ್ಟಾಗಿ ಸುತ್ತಾಡುತ್ತಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.
Updated on: May 19, 2022 | 3:04 PM

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ 2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡ, ತಮಿಳು, ಮಲಯಾಳಂ ಭಾಷೆಯ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಈಗ ಖ್ಯಾತ ನಟ ಆದಿ ಪಿನಿಸೆಟ್ಟಿ ಜೊತೆಗೆ ಹೊಸ ಬಾಳು ಆರಂಭಿಸಿದ್ದಾರೆ. ಇಂದು (ಮೇ 19) ಅವರ ವಿವಾಹ ನೆರವೇರಿದೆ.

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬಂದಿವೆ.

ನಿಕ್ಕಿ ಮತ್ತು ಆದಿ ಈ ಮೊದಲಿನಿಂದಲೂ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಅವರು ಆಗಾಗ ಒಟ್ಟಾಗಿ ಸುತ್ತಾಡುತ್ತಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಜೀವನ ಆರಂಭಿಸಲು ಮುನ್ನುಡಿ ಬರೆದಿದ್ದರು.

ಈಗ ಸದ್ದಿಲ್ಲದೆ ಇಬ್ಬರೂ ಹಸೆಮಣೆ ಏರಿದ್ದಾರೆ. ಈ ಮದುವೆಗೆ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗಿ ಆಗಿದ್ದಾರೆ. ನಟ ನಾನಿ ಮೊದಲಾದವರು ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದಿ ಹಾಗೂ ನಿಕ್ಕಿ ಮದುವೆ ಆಗಿರುವ ಫೋಟೋಗಳನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಫ್ಯಾನ್ಸ್ ವಲಯದಲ್ಲೂ ಈ ಚಿತ್ರಗಳು ವೈರಲ್ ಆಗುತ್ತಿವೆ. ಮೇ 18ರಂದು ಅರಿಶಿಣ ಶಾಸ್ತ್ರ ನೆರವೇರಿತ್ತು.




