AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಹದ ಹೊಡೆತಕ್ಕೆ ಉತ್ತರ ಕರ್ನಾಟಕ ತತ್ತರ: ಊರುಗಳೇ ಮುಳುಗಡೆ, ಇಲ್ಲಿವೆ ಫೋಟೋಸ್​​

ಭೀಮಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ಭಾಗದ ಜನರು ತತ್ತರಿಸಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲ ಗ್ರಾಮಗಳು ಮುಳುಗಡೆಯಾಗಿದ್ದು, ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಕುಡಿಯುವ ನೀರಿಲ್ಲದೆ ಜನ ಪರದಾಡಿದ್ದಾರೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ ಎಂಬ ಮಾಹಿತಿ ಇಲ್ಲಿದೆ. ಫೋಟೋಸ್ ನೋಡಿ.

ಗಂಗಾಧರ​ ಬ. ಸಾಬೋಜಿ
|

Updated on:Sep 29, 2025 | 2:31 PM

Share
ಪ್ರವಾಹದ ಹೊಡೆತಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಒಂದ್ಕಡೆ ಭೀಮಾ ನದಿ ಭೋರ್ಗರೆಯುತ್ತಿದ್ದರೆ, ಉಳಿದ ನದಿಗಳ ಒಡಲು ಕೂಡ ಉಕ್ಕಿ ಹರಿಯುತ್ತಿವೆ. ಪರಿಣಾಮ ಮನೆಗಳು ಸೇರಿದಂತೆ ದೇವಸ್ಥಾನದಲ್ಲಿರುವ ದೇವರಿಗೂ ಜಲದಿಗ್ಬಂಧನ ಎದುರಾಗಿದೆ. ಇನ್ನೊಂದೆಡೆ ಊರಿಗೇ ಊರೇ ಮುಳುಗಡೆಯಾಗಿವೆ.

1 / 6
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದರವಾಡ ಗ್ರಾಮವೇ ಮುಳುಗಡೆಯಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಬಾಣಂತಿ ಶಾಲೆಯಲ್ಲಿ ಆಶ್ರಯ ಪಡೆದಿದ್ದರು. ಗ್ರಾಮಕ್ಕೆ ಎಂಟ್ರಿ ಕೊಟ್ಟ ಎಸ್‌ಡಿಆರ್‌ಎಫ್ ಸಿಬ್ಬಂದಿ ಬಾಣಂತಿ ಮತ್ತು 2 ತಿಂಗಳ ಮಗುವನ್ನ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

2 / 6
ಮಂದರವಾಡ ಗ್ರಾಮಸ್ಥರು ಕಳೆದ ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿದ್ದರು. ಸದ್ಯ ಎಸ್‌ಡಿಆರ್‌ಎಫ್ ಸಿಬ್ಬಂದಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಸುಮಾರು ನೂರು ಮನೆಗಳು ಜಲಾೃತವಾಗಿದ್ದು, ಶುದ್ಧ ಕುಡಿಯುವ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ.

3 / 6
ಜೇವರ್ಗಿ ಬಳಿಯ ಕಟ್ಟಿ ಸಂಗಾವಿ ಸೇತುವೆ ಬಂದ್ ಆಗಿದೆ. ಹೀಗಾಗಿ ಆಯುದ್ಧ ಪೂಜೆಗೆ ಪೂಜೆಯಾಗಬೇಕಿದ್ದ ಹೊಸ ವಾಹನಗಳು ಮೂರು ದಿನದಿಂದ ನಿಂತಲ್ಲೇ ನಿಂತಿವೆ. ಹೊಸ ದ್ವಿಚಕ್ರ ವಾಹನ ಟ್ರ್ಯಾಕ್ಟರ್‌ಗಳನ್ನ ಹೊತ್ತ ಕಂಟೇನರ್‌ಗಳು ಒಂದ್ಕಡೆಯಿಂದ ಮತ್ತೊಂದ್ಕಡೆಗೆ ಹೋಗಲಾಗದೇ ನಿಂತಲ್ಲೇ ನಿಂತಿವೆ.

4 / 6
ಯಾದಗಿರಿಯ ಗ್ರೀನ್ ಸಿಟಿ ಬಡಾವಣೆ ಇದೀಗ ವಾಟರ್ ಸಿಟಿಯಾಗಿ ಬದಲಾಗಿದೆ. ಭೀಮಾ ನದಿ ಪ್ರವಾಹದಿಂದ ಮನೆ, ಶಾಲೆ, ಬಿಜೆಪಿ ಜಿಲ್ಲಾ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಜಲಾವೃತವಾಗಿವೆ. ಮನೆಯಿಂದ ಹೊರಬರಲಾಗದೇ ಜನ ಪರದಾಡುತ್ತಿದ್ದಾರೆ.

5 / 6
ರಾಯಚೂರಿನಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿದೆ. ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ನದಿ ನೀರು ನುಗ್ಗಿ ಭತ್ತದ ಬೆಳೆ ಹಾನಿಯಾಗಿದೆ. 

6 / 6

Published On - 1:55 pm, Mon, 29 September 25