AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬಾಹ್ಯಾಕಾಶ ವೈಭವ; 10 ವರ್ಷದಲ್ಲಿ 398 ವಿದೇಶೀ ಸೆಟಿಲೈಟ್​ಗಳ ಉಡಾವಣೆ: ಮೋದಿ ಖುಷಿ

ನವದೆಹಲಿ, ಜನವರಿ 31: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ವಿಶ್ವದ ಹಲವು ರಾಷ್ಟ್ರಗಳ ಸೆಟಿಲೈಟ್​ಗಳನ್ನು ಆಕಾಶಕ್ಕೆ ಕಳುಹಿಸುವ ಕಾರ್ಯದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಹಾಗೂ ಇಸ್ರೋದ ಸೆಟಿಲೈಟ್ ಉಡಾವಣೆ ಸಾಮರ್ಥ್ಯದ ಬಗ್ಗೆ ಅಂಕಿ ಅಂಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 11:39 AM

Share
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಎನಿಸುವಷ್ಟು ಸಾಧನೆ ಮಾಡುತ್ತಿದೆ. ಚಂದ್ರಯಾನ, ಗಗನಯಾನ, ಮಂಗಳಯಾನಗಳನ್ನು ಕೈಗೊಳ್ಳುತ್ತಿದೆ. ಸ್ವಂತವಾಗಿ ರಾಕೆಟ್​ಗಳನ್ನು ತಯಾರಿಸುತ್ತಿದೆ. ಸಾಕಷ್ಟು ನೌಕೆಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುತ್ತಿದೆ. ಬೇರೆ ಬೇರೆ ದೇಶಗಳವರು ತಮ್ಮ ಸೆಟಿಲೈಟ್​ಗಳನ್ನು ಭಾರತದ ಮೂಲಕ ಆಗಸಕ್ಕೆ ಕಳುಹಿಸುತ್ತಿರುವ ಸಂಖ್ಯೆ ವರ್ಷದಿಂದೊರ್ಷಕ್ಕೆ ಹೆಚ್ಚುತ್ತಲೇ ಇದೆ.

1 / 5
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಟಿಲೈಟ್ ಉಡಾವಣೆ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬಂದಿರುವ ವಿಚಾರವನ್ನು ಹಂಚಿಒಂಡಿದ್ದಾರೆ. ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಅವರು ಒಂದಷ್ಟು ಅಂಕಿ ಅಂಶಗಳಿರುವ ಗ್ರಾಫಿಕ್​ಗಳನ್ನು ಶೇರ್ ಮಾಡಿದ್ದಾರೆ. ‘ಬಾಹ್ಯಾಕಾಶ ಕ್ಷೇತ್ರದಲ್ಲಿ ನೀವು ಭಾರತವನ್ನು ನಂಬಬಹುದು,’ ಎನ್ನುವ ಸಂದೇಶ ರವಾನಿಸಿದ್ದಾರೆ.

2 / 5
ಕಳೆದ 10 ವರ್ಷದಲ್ಲಿ ಭಾರತದಿಂದ ಹತ್ತಿರ ಹತ್ತಿರ 400 ವಿದೇಶೀ ಸೆಟಿಲೈಟ್​ಗಳನ್ನು ಲಾಂಚ್ ಮಾಡಲಾಗಿದೆ. 1979ರಿಂದ 2014ರವರೆಗೆ 35 ವರ್ಷದಲ್ಲಿ ಭಾರತದಿಂದ ಉಡಾವಣೆಗೊಂಡ ವಿದೇಶೀ ಸೆಟಿಲೈಟ್​ಗಳ ಸಂಖ್ಯೆ 35 ಮಾತ್ರ ಇತ್ತು. 2014ರಿಂದ ಈಚೆಗೆ 398 ವಿದೇಶೀ ಸೆಟಿಲೈಟ್​ಗಳನ್ನು ಭಾರತದಿಂದ ಲಾಂಚ್ ಮಾಡಲಾಗಿದೆ.

3 / 5
ಇದೂವರೆಗೆ ಭಾರತದಿಂದ ಉಡಾವಣೆಗೊಂಡ ಒಟ್ಟು ಸೆಟಿಲೈಟ್​ಗಳ ಸಂಖ್ಯೆ 563 ಇದೆ. ಇದರಲ್ಲಿ ವಿದೇಶೀ ಸೆಟಿಲೈಟ್​ಗಳು ಒಳಗೊಂಡಿವೆ. 2014ಕ್ಕೆ ಮುನ್ನ ಭಾರತದಿಂದ ಲಾಂಚ್ ಆದ ಒಟ್ಟು ಸೆಟಿಲೈಟ್​ಗಳ ಸಂಖ್ಯೆ 106 ಮಾತ್ರ. ಕಳೆದ 10 ವರ್ಷದಲ್ಲಿ ಉಡಾವಣೆಗೊಂಡಿರುವುದು ಬರೋಬ್ಬರಿ 457 ಸೆಟಿಲೈಟ್​ಗಳು. ಈ ಗ್ರಾಫಿಕ್ ಅನ್ನು ಪ್ರಧಾನಿಗಳು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

4 / 5
1979ರಿಂದ 2014ರವರೆಗೆ ಸರಾಸರಿಯಾಗಿ ಒಂದು ವರ್ಷದಲ್ಲಿ 1.2 ಸೆಟಿಲೈಟ್​ಗಳ ಉಡಾವಣೆ ಭಾರತದಿಂದ ಆಗಿದೆ. 2014ರಿಂದ ಈಚೆಗಿನ ಅಂಕಿ ಅಂಶದ ಪ್ರಕಾರ ಉಡಾವಣೆಗೊಳ್ಳುತ್ತಿರುವ ಸೆಟಿಲೈಟ್​ಗಳು ಪ್ರತೀ ವರ್ಷ ಸರಾಸರಿ 5.2 ಇದೆ. ಭಾರತದಲ್ಲಿ ವಿಶ್ವಾಸಾರ್ಹ ಎನಿಸಿರುವ ಮತ್ತು ಪ್ರಬಲವಾಗಿರುವ ರಾಕೆಟ್​ಗಳು ತಯಾರಾಗುತ್ತಿರುವುದು ಪ್ರಮುಖ ಕಾರಣ.

5 / 5
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು