- Kannada News Photo gallery Oukitel WP19 Here is the Strongest Battery Phone in Tech market its coming from 21000mAh battery and Fast Charging
ಬರೋಬ್ಬರಿ 21000mAh ಬ್ಯಾಟರಿ ಫೋನ್ ಲಾಂಚ್: ಒಮ್ಮೆ ಚಾರ್ಜ್ ಫುಲ್ ಮಾಡಿದ್ರೆ 100 ದಿನ ನೋ ಟೆನ್ಶನ್
Oukitel WP19: ಈ ಸ್ಮಾರ್ಟ್ ಫೋನಿನ ಹೆಸರು Oukitel WP19. ಇದೇ ಫೋನ್ 21000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ 269.99 ಅಮೆರಿಕನ್ ಡಾಲರ್. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 22 ಸಾವಿರ ರೂಪಾಯಿ ಎನ್ನಬಹುದು.
Updated on: Jul 03, 2022 | 2:53 PM

ಹೆಚ್ಚಿನ ಜನರು ಸಾಕಷ್ಟು ಸಮಯ ಬಾಳಿಕೆ ಬರುವ ಬಿಗ್ ಬ್ಯಾಟರಿ ಬ್ಯಾಕಪ್ ಅನ್ನು ಫೋನನ್ನು ಹುಡುಕುತ್ತಿರುತ್ತಾರೆ. ಚಾರ್ಜ್ ನಿಲ್ಲಲು ಕೆಲವರು ಇತರೆ ಥರ್ಡ್ ಪಾರ್ಟಿ ಆ್ಯಪ್ ಅನ್ನು ಕೂಡ ಇನ್ ಸ್ಟಾಲ್ ಮಾಡಿರುತ್ತಾರೆ. ಆದರೆ ಇಂದು ನಾವು ನಿಮಗೆ 21000 mAh ಬ್ಯಾಟರಿ ಫೋನಿನ ಬಗ್ಗೆ ಮಾಹಿತಿ ನೀಡುತ್ತೇನೆ. ಈ ಫೋನಿನ ಬ್ಯಾಟರಿಯು ಸುಮಾರು 100 ದಿನಗಳ ಸ್ಟ್ಯಾಂಡ್ ಬೈ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ.

ಈ ಸ್ಮಾರ್ಟ್ ಫೋನಿನ ಹೆಸರು Oukitel WP19. ಇದೇ ಫೋನ್ 21000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ 269.99 ಅಮೆರಿಕನ್ ಡಾಲರ್. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 22 ಸಾವಿರ ರೂಪಾಯಿ ಎನ್ನಬಹುದು.

ಈ ಸ್ಮಾರ್ಟ್ ಫೋನ್ 6.78 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 90 Hz ನ ರಿಫ್ರೆಶ್ ದರವನ್ನು ಹೊಂದಿದೆ, ಇದು ಗೇಮಿಂಗ್ ಅನುಭವವನ್ನು ಸುಧಾರಿಸಲು ಕೆಲಸ ಮಾಡುತ್ತದೆ. 21000 mAh ಬ್ಯಾಟರಿಯೊಂದಿಗೆ 33W ವೇಗದ ಚಾರ್ಜರ್ ಅನ್ನು ಸಹ ಬೆಂಬಲಿಸುತ್ತದೆ. 8 GB RAM ಮತ್ತು 256 GB ಆಂತರಿಕ ಸ್ಟೋರೆಜ್ ನೊಂದಿಗೆ ಬರುತ್ತದೆ.

ಈ ಫೋನ್ ಬಳಕೆದಾರರ ಅನುಕೂಲಕ್ಕಾಗಿ, Google Pay ಜೊತೆಗೆ NFC ಅನ್ನು ಸಹ ಬೆಂಬಲಿಸಲಾಗಿದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಕಂಪನಿಯು ಇದರ ಹಿಂದೆ ಮೂರು ಕ್ಯಾಮೆರಾ ಸೆಟಪ್ ಅನ್ನು ನೀಡಿದೆ. ಇದರಲ್ಲಿರುವ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಗಳಾಗಿದ್ದು, ಎಲ್ಇಡಿ ಫ್ಲ್ಯಾಷ್ ಲೈಟ್ ಕೂಡ ಇದೆ.

Oukitel ನ ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ಮಾಹಿತಿಯ ಪ್ರಕಾರ, ಈ ಫೋನ್ ಬ್ಯಾಟರಿಯು ಪೂರ್ಣ ಚಾರ್ಜ್ನಲ್ಲಿ 2252 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಅಂದರೆ 94 ದಿನಗಳವರೆಗೆ ಚಾರ್ಜ್ ನಿಲ್ಲುತ್ತದೆ.









