- Kannada News Photo gallery Payana Car museum Vishnuvardhan And other Celebrities car In museum Entertainment News In Kannada
ಹೇಗಿದೆ ನೋಡಿ ವಿಷ್ಣುವರ್ಧನ್ ಬಳಸುತ್ತಿದ್ದ ವಿಂಟೇಜ್ ಕಾರ್; ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು
ವಿಂಟೇಜ್ ಕಾರುಗಳ ಬಗ್ಗೆ ಕೆಲವರಿಗೆ ಸಖತ್ ಕ್ರೇಜ್ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರು ಎಂದರಂತೂ ವಿಶೇಷ ಪ್ರೀತಿ ಇರುತ್ತದೆ. ಬೆಂಗಳೂರು-ಮೈಸೂರು ಹೈವೇಲಿ ಇರುವ ‘ಪಯಣ’ ವಿಂಟೇಜ್ ಕಾರ್ ಮ್ಯೂಸಿಂನಲ್ಲಿ ಅನೇಕ ಕಾರುಗಳ ಕಲೆಕ್ಷನ್ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
Updated on:Jul 16, 2024 | 11:06 AM

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸಿಗೋ ವಿಂಟೇಜ್ ಕಾರ್ ಮ್ಯೂಸಿಂಯಂ ಬೆಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿ ಇದೆ. ಇಲ್ಲಿ ಹಲವು ಸೆಲೆಬ್ರಿಟಿಗಳ ಕಾರುಗಳು ಇವೆ.

ಕನ್ನಡದ ನಟ ವಿಷ್ಣುವರ್ಧನ್ ಅವರು ಬಳಕೆ ಮಾಡುತ್ತಿದ್ದ ದಟ್ಸನ್ ಬ್ಲೂಬರ್ಡ್ 1.8 ಜಿಎಲ್ ಕಾರು ಕೂಡ ಈ ಮ್ಯೂಸಿಯಂನಲ್ಲಿ ಇದೆ. ಇದರಲ್ಲಿ ವಿಷ್ಣುವರ್ಧನ್ ಅವರು ಓಡಾಡುತ್ತಿದ್ದರು. 4 ಸಿಲಿಂಡರ್ ಕಾರು ಇದಾಗಿತ್ತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಕಾಲೇಜು ವಿದ್ಯಾಭ್ಯಾಸ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದ ಕಾರು ಇದು. ಈ ಕಾರಿನ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಸ್ಟ್ಯಾಂಡರ್ಡ್ ಹೆರಾಲ್ಡ್ ಕಾರು ಇದಾಗಿದ್ದು 1962ನೇ ಮಾಡೆಲ್ನ ಕಾರು..

ಇದು ಉಕ್ರೇನ್ನ ಮಿಲಿಟರಿ ಟ್ರಕ್. ಈ ಟ್ರಕ್ನ ಹೆಸರು KrAZ- ಮಿಲಿಟರಿ ಟ್ರಕ್. 1981ನೇ ಮಾಡೆಲ್ನ ಟ್ರಕ್ ಇದಾಗಿದೆ. 14.9 ಲೀಟರ್ 8 ಸಿಲಿಂಡರ್ ಡೀಸೆಲ್ ಟ್ರಕ್ ಇದು.

ಇದು ಟಾಟಾ ಕಂಪನಿಯವರು 1973ರಲ್ಲಿ ತಯಾರಿಸಿದ ಟ್ರಕ್ ಇದಾಗಿದೆ. ಇದು 6 ಸಿಲಿಂಡರ್ ಟ್ರಕ್. ಈ ಟ್ರಕ್ನ ತೂಕ 5000 ಕೆಜಿ. ಕುಂದಾಪುರದವರೊಬ್ಬರು ಇದನ್ನು ಮ್ಯೂಸಿಯಂಗೆ ಕೊಡುಗೆ ನೀಡಿದ್ದಾರೆ.

ಅಂಬಾಸಿಡರ್ ಕಾರುಗಳ ಬಗ್ಗೆ ಅನೇಕರಿಗೆ ಪ್ರೀತಿ ಇದೆ. ಈಗಲೂ ರಸ್ತೆಯ ಮೇಲೆ ಒಂದೊಂದು ಅಂಬಾಸಿಡರ್ ಕಾರುಗಳು ಕಾಣುತ್ತವೆ. ಆಗ ಜನರು ಕಣ್ಬಿಟ್ಟುಕೊಂಡು ನೋಡುತ್ತಾರೆ. ಈ ರೀತಿಯ ಕಾರ್ ಕಲೆಕ್ಷನ್ ಕೂಡ ಇಲ್ಲಿದೆ.

ಸಾರೋಟು, ದೇಶ-ವಿದೇಶಗಳ ಕಾರುಗಳು, ಬೈಕ್ ಕಲೆಕ್ಷನ್ ಕೂಡ ಇಲ್ಲಿದೆ. ಬೆಂಗಳೂರಿನಿಂದ ಒಂದು ದಿನ ಪ್ರವಾಸ ಮಾಡಿ ಬರಲು ಇದು ಹೇಳಿ ಮಾಡಿಸಿದ ಜಾಗ.
Published On - 10:58 am, Tue, 16 July 24

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




