
ಪ್ರಧಾನಿ ನರೇಂದ್ರ ಮೋದಿಯವರು ಇಂದು(ಆಗಸ್ಟ್ 10) ರಕ್ಷಾ ಬಂಧನವನ್ನು ನವದೆಹಲಿಯ ತಮ್ಮ ನಿವಾಸದಲ್ಲಿ ಆಚರಿಸಿಕೊಂಡಿದ್ದು, ಈ ವೇಳೆ ಮಹುಳೆಯರು, ಮಕ್ಕಳು ಪ್ರಧಾನಿ ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸೋದರಿಯರು ಮೋದಿ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಕೆಲಸ ಮಾಡುವವರು ಹಾಗೂ ಕಚೇರಿ ಸಿಬ್ಬಂದಿಯ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ವಿಶೇಷ ರಕ್ಷಾ ಬಂಧನ ಆಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಲಾ ಮಗುವೊಂದು ರಾಖಿ ಕಟ್ಟಿದ್ದು, ಈ ವೇಳೆ ಪ್ರೀತಿ ಸಂಕೇತವನ್ನು ತೋರಿಸಿ ನಗು ಮುಖ ಬೀರಿದ್ದಾರೆ.

ದೆಹಲಿಯ ಅವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಲಾ ಮಕ್ಕಳು ಸಾಮೂಹಿಕವಾಗಿ ರಾಖಿ ಕಟ್ಟು ರಕ್ಷಾಬಂಧನ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

ಶಾಲೆ ಮಗುವೊಂದು ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಟ್ಟಿ ಬಳಿಕ ಮೈಕ್ ನಲ್ಲಿ ಏನೋ ಮಾತನಾಡಿದ್ದಾರೆ. ಕ್ಯೂಟ್ ಫೋಟೋ ವೈರಲ್ ಆಗಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದ್ದಾರೆ. ದೇಶವಾಸಿಗಳಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
Published On - 1:51 pm, Sat, 9 August 25