‘ಪೋರ್ ತೊಳಿಲ್’ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ಅಶೋಕ್ ಸೆಲ್ವನ್ ಅವರು ಕೀರ್ತಿ ಪಾಂಡಿಯನ್ ಜೊತೆ ವಿವಾಹ ಆಗಿದ್ದಾರೆ. ಬುಧವಾರ (ಸೆಪ್ಟೆಂಬರ್ 13) ತಮಿಳುನಾಡಿನ ತಿರುನಲ್ವೇಲಿಯಲ್ಲಿ ಈ ಮದುವೆ ನಡೆದಿದೆ.
ಅಶೋಕ್ ಸೆಲ್ವನ್ ಹಾಗೂ ಕೀರ್ತಿ ಪಾಂಡಿಯನ್ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಶನಿವಾರ ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಶೋಕ್ ಹಾಗೂ ಕೀರ್ತಿಗೆ ಶುಭಾಶಯ ಬರುತ್ತಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಫೋಟೋ ಶೇರ್ ಮಾಡಿಕೊಂಡು ಇವರಿಗೆ ವಿಶ್ ತಿಳಿಸುತ್ತಿದ್ದಾರೆ. ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಅಶೋಕ್ ಸೆಲ್ವನ್ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ತೆರೆಗೆ ಬಂದ ‘ಪೋರ್ ತೊಳಿಲ್’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು.
ಕೀರ್ತಿ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ನಟ, ನಿರ್ಮಾಪಕ, ರಾಜಕಾರಣಿ ಅರುಣ್ ಪಾಂಡಿಯನ್ ಅವರ ಮಗಳು. 2019ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಬೆರಳೆಣಿಕೆ ಸಿನಿಮಾ ಮಾಡಿದ್ದಾರೆ.
ಸದ್ಯ ಅಶೋಕ್ ಹಾಗೂ ಕೀರ್ತಿ ‘ಬ್ಲ್ಯೂ ಸ್ಟಾರ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಾ ರಂಜಿತ್ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಇವರು ತೆರೆಮೇಲೆ ಒಂದಾಗುತ್ತಿದ್ದಾರೆ.
Published On - 2:59 pm, Wed, 13 September 23