Puneeth Rajkumar: ತಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ಗೆ ಅಭಿಮಾನಿಗಳಿಂದ ವಿಭಿನ್ನ ನಮನ
ಅಭಿಮಾನಿಗಳ ಪ್ರೀತಿಯ ಅಪ್ಪು.. ಸೂಪರ್‌ಸ್ಟಾರ್ ಕಿರೀಟ ತಲೆ ಮೇಲಿದ್ರು ಸರಳತೆಯಿಂದಲೇ ಜನರೊಂದಿಗೆ ಬೆರೆಯುತ್ತಿದ್ದ ನಟ ಸಾರ್ವಭೌಮ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ರಿಗೆ ಅಭಿಮಾನಿಗಳು ಭಿನ್ನ ಭಿನ್ನವಾಗಿ ಅಂತಿಮ ನಮನ ಸಲ್ಲಿಸಿದ್ದಾರೆ.
Updated on:Oct 30, 2021 | 3:29 PM

power star puneeth rajkumar fans tribute

power star puneeth rajkumar fans tribute

ಧಾರವಾಡದ ಕೆಲಗೇರಿ ಬಡಾವಣೆಯ ಮಂಜುನಾಥ ಹಿರೇಮಠ ಎಂಬ ಕಲಾವಿದ ಅಪ್ಪು ಕಲಾಕೃತಿ ತಯಾರಿಸಿ ವಿಭಿನ್ನವಾಗಿ ಪುನೀತ್ ರಾಜ್ಕುಮಾರ್ರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅಪ್ಪು ಮತ್ತೆ ಕನ್ನಡ ಮಣ್ಣಲ್ಲೇ ಹುಟ್ಟಿ ಬರಲೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಮಣ್ಣಲ್ಲೇ 5 ಗಂಟೆಗಳಲ್ಲಿ 2 ಅಡಿಯ ಅಪ್ಪು ಕಲಾಕೃತಿ ನಿರ್ಮಾಣ ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(46) ವಿಧಿವಶವಾದ ಹಿನ್ನೆಲೆ ದಾವಣಗೆರೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಅಭಿಮಾನಿಗಳು ಇಡೀ ರಾತ್ರಿ ಭಜನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.

ನಟ ಪುನೀತ್ ರಾಜಕುಮಾರ್(46) ವಿಧಿವಶ ಹಿನ್ನೆಲೆ ಚಿತ್ರದುರ್ಗದ ರಾಜಬೀದಿಯಲ್ಲಿ ಪುನೀತ್ ಭಾವಚಿತ್ರ ಮೆರವಣಿಗೆ ಮಾಡಲಾಗಿದೆ. ಶಾರದಾ ಬ್ರಾಸ್ ಬ್ಯಾಂಡ್ ನಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿದೆ.

ಯಾವ ವಿಷಯವೂ ತಿಳಿಯದೆ ಮಲಗಿದ್ದ ಬಾಲಕಿಯನ್ನು ಎಬ್ಬಿಸಿದ ತಾಯಿ ಮೊಬೈಲ್ನಲ್ಲಿ ತನ್ನ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಗಲಿದ ಸಂಗತಿ ತೋರಿಸುತ್ತಿದ್ದಂತೆ ಪುಟ್ಟ ಅಭಿಮಾನಿ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ವೈರಲ್ ಆಗಿದೆ. ತನ್ನ ಅಪ್ಪನನ್ನು ತಬ್ಬಿ ಪುಟ್ಟ ಬಾಲಕಿ ಕಣ್ಣೀರು ಹಾಕಿದ್ದಾಳೆ.

ನಟ ಪುನೀತ್ರ ಫ್ಲೆಕ್ಸ್ಗೆ ಹಾರ ಹಾಕಿ ಅಭಿಮಾನಿಗಳು ಪೂಜೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ ಘಟನೆ ಹಾಸನದಲ್ಲಿ ಕಂಡು ಬಂದಿದೆ. ಅನೇಕ ಅಭಿಮಾನಿಗಳು ಅಪ್ಪ ಸರ್ ಹಾಸಕ್ಕೆ ಬಂದಾಗ ನಮ್ಮ ಜೊತೆ ತುಂಬಾ ಚನ್ನಾಗಿ ಮಾತಾಡುತ್ತಿದ್ದರು. ಅವರು ಇಲ್ಲ ಎಂಬುವುದು ನಂಬಲು ಕಷ್ಟವಾಗುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.
Published On - 3:27 pm, Sat, 30 October 21



















