Updated on: Jun 20, 2023 | 6:30 AM
ನಟಿ ಪ್ರಿಯಾ ವಾರಿಯರ್ ಕಣ್ಸನ್ನೆ ಹುಡುಗಿ ಎಂದೇ ಫೇಮಸ್ ಆದವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಫ್ಯಾನ್ಸ್ಗೋಸ್ಕರ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಾಟ್ ಫೋಟೋ ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಪ್ರಿಯಾ ವಾರಿಯರ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ಈ ಫೋಟೋ ನೋಡಿದ ಅನೇಕರು ನಟಿಗೆ ಬಾಡಿ ಶೇಮಿಂಗ್ ಮಾಡಿದ್ದಾರೆ. ‘ಪ್ರಿಯಾ ವಾರಿಯರ್ ತೆಳ್ಳಗಿದ್ದಾರೆ. ಬರೀ ಮೂಳೆ ಅಷ್ಟೇ ಕಾಣುತ್ತಿದೆ. ಅದನ್ನು ಬಿಟ್ಟು ಮತ್ತೇನೂ ಕಾಣುತ್ತಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದಕ್ಕೆಲ್ಲ ಪ್ರಿಯಾ ವಾರಿಯರ್ ಅವರು ತಲೆಕೆಡಿಸಿಕೊಂಡಿಲ್ಲ. ನಿರಂತರವಾಗಿ ಅವರು ಫೋಟೋ ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಪ್ರಿಯಾ ವಾರಿಯರ್ ಕನ್ನಡದಲ್ಲೂ ನಟಿಸುತ್ತಿದ್ದಾರೆ. ಅವರು ಅಭಿನಯಿಸುತ್ತಿರುವ ಕನ್ನಡದ ‘ವಿಷ್ಣು ಪ್ರಿಯ’ ಸಿನಿಮಾ ಕೆಲಸಗಳು ವಿಳಂಬ ಆಗಿವೆ.