Updated on: Sep 19, 2023 | 11:13 PM
ಬೆಂಗಳೂರಿನ ಬೆಡಗಿ ಪ್ರಿಯಾಮಣಿ, ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ದಕ್ಷಿಣದ ಚಿತ್ರರಂಗಗಳಲ್ಲಿ ನಟಿಸುವ ಜೊತೆಗೆ ಬಾಲಿವುಡ್ನಲ್ಲಿ ಅವಕಾಶ ಸಿಕ್ಕಾಗೆಲ್ಲ ಮಿಂಚಿದ್ದಾರೆ.
ಪ್ರಿಯಾಮಣಿ ನಟನೆಯ 'ಜವಾನ್' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ.
ಮದುವೆಯಾಗಿ ಸಂಸಾರ ನಿಭಾಯಿಸುವ ಜೊತೆಗೆ ಸಿನಿಮಾವನ್ನೂ ತೂಗಿಸಿಕೊಂಡು ಹೋಗುತ್ತಿದ್ದಾರೆ ಪ್ರಿಯಾಮಣಿ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಮಣಿಯನ್ನು 'ಆಂಟಿ' ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.
ತಮ್ಮನ್ನು 'ಆಂಟಿ' ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ ಪ್ರಿಯಾಮಣಿ.
ನನಗೆ ಈಗ ವಯಸ್ಸು 38, ನಾನು ಈಗಲೂ ಹಾಟ್ ಆಗಿದ್ದೇನೆ, ನಿನ್ನ ಬಾಯಿ ಮುಚ್ಚಿಕೊ ಎಂದಿದ್ದಾರೆ ಪ್ರಿಯಾಮಣಿ.
ಪ್ರಿಯಾಮಣಿ ಪ್ರಸ್ತುತ ಮೋಹನ್ಲಾಲ್ ಜೊತೆಗೆ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.