- Kannada News Photo gallery Pro Kabaddi 2021: 5 star players who played only 1 PKL season for Bengaluru Bulls
Pro Kabaddi 2021: ಬೆಂಗಳೂರು ಬುಲ್ಸ್ ಪರ ಕೇವಲ 1 ಸೀಸನ್ ಆಡಿದ 5 ಸ್ಟಾರ್ ಆಟಗಾರರು ಯಾರು ಗೊತ್ತಾ?
Pro Kabaddi 2021: ಈ ಹಿಂದೆ ಬೆಂಗಳೂರು ತಂಡವನ್ನು ಅನೇಕ ಸ್ಟಾರ್ ಆಟಗಾರರು ಪ್ರತಿನಿಧಿಸಿದ್ದರು. (ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
Updated on: Dec 19, 2021 | 10:29 PM

ದೇಶೀಯ ಅಂಗಳದ ಅಸಲಿ ಕದನ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್ 22 ರಿಂದ 8ನೇ ಸೀಸನ್ ಲೀಗ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಇನ್ನು ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಇನ್ನು ಸೀಸನ್ 6 ನ ಚಾಂಪಿಯನ್ ತಂಡವಾಗಿರುವ ಬೆಂಗಳೂರು ಬುಲ್ಸ್ ಈ ಬಾರಿ ಕೂಡ ಬಲಿಷ್ಠವಾಗಿದೆ. ಹೀಗಾಗಿ ಸೀಸನ್ 8 ನಲ್ಲೂ ತಂಡದಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಹಾಗೆಯೇ ಈ ಸಲ ಪವನ್ ಕುಮಾರ್ ಶೆಹ್ರಾವತ್ ತಂಡವನ್ನು ಮುನ್ನಡೆಸುತ್ತಿರುವ ಕಾರಣ ನಿರೀಕ್ಷೆ ಕೂಡ ಹೆಚ್ಚಾಗಿದೆ.

ಇನ್ನು ಈ ಹಿಂದೆ ಬೆಂಗಳೂರು ತಂಡವನ್ನು ಅನೇಕ ಸ್ಟಾರ್ ಆಟಗಾರರು ಪ್ರತಿನಿಧಿಸಿದ್ದರು. ಮಂಜೀತ್ ಛಿಲ್ಲರ್, ಧರ್ಮರಾಜ್ ಚೇರಲಾಥನ್, ರೋಹಿತ್ ಕುಮಾರ್ ಮತ್ತು ಅಜಯ್ ಠಾಕೂರ್ ಅವರಂತಹ ಆಟಗಾರರು ಹಲವು ಸೀಸನ್ನಲ್ಲಿ ಬೆಂಗಳೂರು ಪರ ಆಡಿದ್ದರು. ಇದಾಗ್ಯೂ ಐವರು ಸ್ಟಾರ್ ಆಟಗಾರರು ಕೇವಲ ಒಂದು ಸೀಸನ್ ಮಾತ್ರ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆ ಆಟಗಾರರು ಯಾರೆಂದರೆ...

#1 ಪರ್ದೀಪ್ ನರ್ವಾಲ್: ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎಂದರೆ ಪ್ರದೀಪ್ ನರ್ವಾಲ್. ಆದರೆ ಇದೇ ಪ್ರದೀಪ್ ಈ ಹಿಂದೆ ಬೆಂಗಳೂರು ಬುಲ್ಸ್ ತಂಡದ ಆಟಗಾರರಾಗಿದ್ದರು. ಪಿಕೆಎಲ್ ಸೀಸನ್ 2 ನಲ್ಲಿ ಪ್ರದೀಪ್ ನರ್ವಾಲ್ 6 ಪಂದ್ಯಗಳನ್ನು ಆಡಿದ್ದರು.

#2 ಕಾಶಿಲಿಂಗ್ ಅಡಕೆ: ದಬಾಂಗ್ ಡೆಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರಲ್ಲಿ ಕಾಶಿಲಿಂಗ್ ಅಡಕೆ ಕೂಡ ಒಬ್ಬರು. ಆದರೆ ಪಿಕೆಎಲ್ ಸೀಸನ್ 6 ನಲ್ಲಿ ಕಾಶಿಲಿಂಗ್ ಬೆಂಗಳೂರು ಬುಲ್ಸ್ ಪರ ಆಡಿದ್ದರು. ಅಷ್ಟೇ ಅಲ್ಲದೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

#3 ಸುರೇಂದರ್ ನಾಡಾ: ಪಟ್ಟಿಯಲ್ಲಿರುವ ಮತ್ತೊಬ್ಬ ಮಾಜಿ ಯು ಮುಂಬಾ ಆಟಗಾರ ಡಿಫೆಂಡರ್ ಸುರೇಂದರ್ ನಾಡಾ. ಪಿಕೆಎಲ್ ಸೀಸನ್ 4 ನಲ್ಲಿ ಸುರೇಂದರ್ ಬೆಂಗಳೂರು ಬುಲ್ಸ್ ಪರ 13 ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಐದನೇ ಸೀಸನ್ನಲ್ಲಿ ಹರ್ಯಾಣ ಸ್ಟೀಲರ್ಸ್ ಪರ ಕಣಕ್ಕಿಳಿದಿದ್ದರು.

#4 ಮೋಹಿತ್ ಚಿಲ್ಲರ್: ಯು ಮುಂಬಾ ಪರ ಮೊದಲ ಮೂರು ಸೀಸನ್ ಆಡಿದ್ದ ಮೋಹಿತ್ ಚಿಲ್ಲರ್ ಪಿಕೆಎಲ್ ನಾಲ್ಕನೇ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ಪರ ಕಣಕ್ಕಿಳಿದಿದ್ದರು. ಹಾಗೆಯೇ ಒಂದು ಸೀಸನ್ ಬಳಿಕ ಹರ್ಯಾಣ ತಂಡದ ಪಾಲಾಗಿದ್ದರು.

#5 ರವೀಂದರ್ ಪಹಲ್: ದಬಾಂಗ್ ಡೆಲ್ಲಿ ತಂಡದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದ ರವೀಂದರ್ ಪಹಲ್ ಪಿಕೆಎಲ್ 5 ನೇ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ಪರ ಆಡಿದ್ದರು. ಆದರೆ ಮರುವರ್ಷವೇ ಬುಲ್ಸ್ ಫ್ರಾಂಚೈಸಿ ಪಹಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಈ ಐವರು ಸ್ಟಾರ್ ಆಟಗಾರರು ಬೆಂಗಳೂರು ಬುಲ್ಸ್ ಪರ ಏಕೈಕ ಸೀಸನ್ ಆಡಿದ ಪ್ಲೇಯರ್ಸ್ ಎನಿಸಿಕೊಂಡಿದ್ದಾರೆ.
