PKL 8: ಪ್ರೋ ಕಬಡ್ಡಿ ಲೀಗ್ ತಂಡಗಳ ನಾಯಕರುಗಳ ಪಟ್ಟಿ ಹೀಗಿದೆ
Pro Kabaddi League Season 8: ಡಿಸೆಂಬರ್ 22 ರಿಂದ ಶುರುವಾಗಲಿರುವ 8ನೇ ಸೀಸನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. (ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
Updated on:Dec 16, 2021 | 10:45 PM

ಕಬಡ್ಡಿ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ (Pro Kabaddi League Season 8 ) ಸೀಸನ್ 8ಗೆ ದಿನಗಣನೆ ಶುರುವಾಗಿದೆ.

ಡಿಸೆಂಬರ್ 22 ರಿಂದ ಶುರುವಾಗಲಿರುವ 8ನೇ ಸೀಸನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಇನ್ನು ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಈ ಬಾರಿ ಕಾದಾಟಕ್ಕೆ ಈಗಾಗಲೇ ಬಹುತೇಕ ತಂಡಗಳು ತಮ್ಮ ನಾಯಕರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಪ್ರತಿ ತಂಡಗಳ ನಾಯಕರುಗಳ ಹೆಸರು ಹೀಗಿದೆ....

#1 ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್

#2 ದಬಾಂಗ್ ದೆಹಲಿ: ಜೋಗಿಂದರ್ ನರ್ವಾಲ್

#3 ಯುಪಿ ಯೋಧಾ: ನಿತೇಶ್ ಕುಮಾರ್

#4 ಯು ಮುಂಬಾ: ಫಾಝೆಲ್ ಅತ್ರಾಚಲಿ

#5 ಹರಿಯಾಣ ಸ್ಟೀಲರ್ಸ್: ಇನ್ನೂ ನಾಯಕನ ಘೋಷಿಸಿಲ್ಲ

#6 ಬೆಂಗಳೂರು ಬುಲ್ಸ್: ಪವನ್ ಕುಮಾರ್ ಶೆಹ್ರಾವತ್

#7 ಜೈಪುರ ಪಿಂಕ್ ಪ್ಯಾಂಥರ್ಸ್: ದೀಪಕ್ ಹೂಡಾ

#8 ಪಾಟ್ನಾ ಪೈರೇಟ್ಸ್ : ಪ್ರಶಾಂತ್ ಕುಮಾರ್ ರೈ

#9 ಗುಜರಾತ್ ಜೈಂಟ್ಸ್ : ಸುನಿಲ್ ಕುಮಾರ್

#10 ಪುಣೇರಿ ಪಲ್ಟನ್: ನಿತಿನ್ ತೋಮರ್

#11 ತೆಲುಗು ಟೈಟಾನ್ಸ್: ರೋಹಿತ್ ಕುಮಾರ್

#12 ತಮಿಳು ತಲೈವಾಸ್: ಸುರ್ಜೀತ್ ಸಿಂಗ್
Published On - 10:32 pm, Thu, 16 December 21




