AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸ್ಕರಿಸಿದ ಮೀನು ಆರೋಗ್ಯಕ್ಕೆ ಹಾನಿಕಾರಕ, ತಾಜಾ ಮೀನು ಖರೀದಿಸುವ ಸಿಂಪಲ್ ಟಿಪ್ಸ್ ಇಲ್ಲಿದೆ

ತರಕಾರಿಗಳು ಖರೀದಿಸುವಾಗ ತಾಜಾ ತರಕಾರಿಗಳನ್ನೇ ಖರೀಸುತ್ತೇವೆ. ಆದರೆ ಮಾಂಸಾಗಾರ ಖರೀದಿಸುವಾಗ ಅನೇಕರು ಗುಣಮಟ್ಟ ಪರೀಕ್ಷಿಸದೆ ಖರೀದಿಸುತ್ತಾರೆ. ಇನ್ನೂ ಕೆಲವರಿಗೆ ತಾಜಾ ಹೇಗೆ ಕಂಡುಹಿಡಿಯುವುದು ಸಂಸ್ಕರಿಸಿದ ಮಾಂಸವೇ ಎಂದು ಯಾವ ರೀತಿ ಪತ್ತೆಹಚ್ಚುವುದು ಎಂದು ತಿಳಿದಿಲ್ಲ. ಅಂತಹವರಿಗಾಗಿ ಈ ಸುದ್ದಿ ಉಪಯುಕ್ತವಾಗಿದೆ.

TV9 Web
| Updated By: Rakesh Nayak Manchi|

Updated on:Feb 05, 2023 | 7:37 PM

Share
Processed fish is not good for health Here are some simple tips to buy fresh fish details in kannada

ತರಕಾರಿಗಳು ಖರೀದಿಸುವಾಗ ತಾಜಾ ತರಕಾರಿಗಳನ್ನೇ ಖರೀಸುತ್ತೇವೆ. ಆದರೆ ಮಾಂಸಾಗಾರ ಖರೀದಿಸುವಾಗ ಅನೇಕರು ಗುಣಮಟ್ಟ ಪರೀಕ್ಷಿಸದೆ ಖರೀದಿಸುತ್ತಾರೆ. ಇನ್ನೂ ಕೆಲವರಿಗೆ ತಾಜಾ ಹೇಗೆ ಕಂಡುಹಿಡಿಯುವುದು ಸಂಸ್ಕರಿಸಿದ ಮಾಂಸವೇ ಎಂದು ಯಾವ ರೀತಿ ಪತ್ತೆಹಚ್ಚುವುದು ಎಂದು ತಿಳಿದಿಲ್ಲ. ಹೀಗಾಗಿ ವ್ಯಾಪಾರಿಗಳು ನೀಡಿದ್ದನ್ನು ತೆಗೆದುಕೊಂಡು ಬರುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಲಿದೆ. ಕೋಳಿ ಕಣ್ಣೆದುರು ಮಾಂಸ ಮಾಡುವುದರಿಂದ ತೊಂದರೆ ಇಲ್ಲ, ಆದರೆ ಮೀನಿನ ವಿಚಾರದಲ್ಲಿ ಜಾಗರೂಕರಾಗಿರಬೇಕು.

1 / 5
Processed fish is not good for health Here are some simple tips to buy fresh fish details in kannada

ಮೀನು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ಆರೋಗ್ಯಕರ ಆಹಾರವಾಗಿದೆ. ಮಕ್ಕಳಿಂದ ದೊಡ್ಡವರವರೆಗೆ ಭಯವಿಲ್ಲದೆ ಮೀನು ತಿನ್ನಬಹುದು. ಮೀನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ದೊರೆಯುತ್ತವೆ. ಅದಕ್ಕಾಗಿಯೇ ವೈದ್ಯರು ವಾರಕ್ಕೊಮ್ಮೆಯಾದರೂ ಮೀನು ತಿನ್ನಲು ಸಲಹೆ ನೀಡುತ್ತಾರೆ. (Photo: istock)

2 / 5
Processed fish is not good for health Here are some simple tips to buy fresh fish details in kannada

ಕೆಲವೊಮ್ಮೆ ಮೀನಿನ ಬೇಡಿಕೆಗೆ ಅನುಗುಣವಾಗಿ ಮೋಸವನ್ನೂ ಮಾಡಲಾಗುತ್ತದೆ. ಅದರಲ್ಲೂ ಮೀನುಗಳನ್ನು ಐಸ್ ಕ್ಯೂಬ್ ಬಾಕ್ಸ್​​ಗಳಲ್ಲಿ ಎರಡು ಮೂರು ದಿನ ಇಟ್ಟು ನಂತರ ಮಾರಾಟ ಮಾಡಬಹುದು. ಇದು ಮೀನನ್ನು ವಿಷವನ್ನಾಗಿಸುತ್ತದೆ. ಹಾಗಾದರೆ ಉತ್ತಮವಾದ ಮೀನುಗಳನ್ನು ಹೇಗೆ ಖರೀದಿಸುವುದು ಎಂದು ನೋಡೋಣ. (Photo: istock)

3 / 5
Processed fish is not good for health Here are some simple tips to buy fresh fish details in kannada

ಮೀನು ಹೊಳೆಯುವ ಮತ್ತು ಉತ್ತಮ ಬಣ್ಣದ್ದಾಗಿರಬೇಕು. ಮೀನಿನ ಕಣ್ಣುಗಳನ್ನು ಪರೀಕ್ಷಿಸಿ. ಅದು ಸ್ಪಷ್ಟವಾಗಿದ್ದರೆ ಅದು ಒಳ್ಳೆಯ ಮೀನು ಎಂದರ್ಥ. ಮೀನಿನ ಕಣ್ಣುಗಳು ಮೋಡವಾಗಿದ್ದರೆ, ಅದನ್ನು ಖರೀದಿಸಬೇಡಿ. ನಿಮ್ಮ ಬೆರಳಿನಿಂದ ಮೀನಿನ ದೇಹದ ಭಾಗವನ್ನು ಒತ್ತಿರಿ. ದೃಢವಾಗಿದ್ದರೆ ಒಳ್ಳೆಯ ಮೀನು. ಅದು ಮೃದುವಾಗಿದ್ದರೆ ತಿನ್ನಲು ಯೋಗ್ಯವಲ್ಲದ ಮೀನು ಎಂದು ಪರಿಗಣಿಸಬೇಕು. (Photo: istock)

4 / 5
Processed fish is not good for health Here are some simple tips to buy fresh fish details in kannada

ಬಾಲವನ್ನು ಹಿಡಿದಾಗ ತಾಜಾ ಮೀನು ಹೊಳೆಯುತ್ತದೆ. ಅದೇ ಕೆಲವು ದಿನಗಳವರೆಗೆ, ಶೇಖರಣೆಯಲ್ಲಿರುವ ಮೀನಿನ ದೇಹದ ಭಾಗವು ಸಡಿಲ ಮತ್ತು ಮೃದುವಾಗಿರುತ್ತದೆ. ಮೀನಿನ ಕಿವಿರುಗಳನ್ನು ಪರಿಶೀಲಿಸಿ. ರಕ್ತದ ಹರಿವು ತಾಜಾವಾಗಿದ್ದರೆ ಉತ್ತಮ ಮೀನು. ಮೀನಿನ ರಕ್ತ ಹೆಪ್ಪುಗಟ್ಟಿದ್ದರೆ ಅವುಗಳನ್ನು ಐಸ್ ಪ್ಯಾಕ್‌ನಲ್ಲಿ ಸಂಗ್ರಹಿಸಲಾಗಿದೆ ಎಂದರ್ಥ. ಮೀನು ತುಂಬಾ ಕೆಟ್ಟ ವಾಸನೆಯನ್ನು ಹೊಂದಿದ್ದರೆ ಅದು ಸೇವೆನೆಗೆ ಯೋಗ್ಯವಲ್ಲ ಎಂದರ್ಥ. (Photo: istock)

5 / 5

Published On - 7:37 pm, Sun, 5 February 23

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ