
ಅಭಿಮಾನಿಗಳ ಜೊತೆ ಅಪ್ಪು ಬೆರೆಯುತ್ತಿದ್ದರು. ಅವರಿಂದ ಆಟೋಗ್ರಾಫ್ ಪಡೆದ ಓಂಕಾರ್ ಎಂಬ ಅಭಿಮಾನಿ ಈಗ ಸುದ್ದಿಯಲ್ಲಿದ್ದಾರೆ. ಓಂಕಾರ್ ಅವರ ಬೈಕ್ ಮೇಲೆ ಪುನೀತ್ ರಾಜ್ಕುಮಾರ್ ಆಟೋಗ್ರಾಫ್ ಹಾಕಿದ್ದರು.

‘ಅಣ್ಣಾಬಾಂಡ್’ ಸಿನಿಮಾ ಬಿಡುಗಡೆ ಆದಾಗ ಪುನೀತ್ ರಾಜ್ಕುಮಾರ್ ಅವರು ಓಂಕಾರ್ ಅವರ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ್ದರು. ಅಲ್ಲದೇ ಆ ಬೈಕ್ ಓಡಿಸಿ, ಅಭಿಮಾನಿಯನ್ನು ಖುಷಿಪಡಿಸಿದ್ದರು. ಆ ಬೈಕ್ ಫೋಟೋಗಳು ಈಗ ವೈರಲ್ ಆಗಿವೆ.

ಅಂದು ಪುನೀತ್ ರಾಜ್ಕುಮಾರ್ ಅವರು ಆಟೋಗ್ರಾಫ್ ಹಾಕಿದ್ದ ಬೈಕ್ ಮೇಲೆ ಇಂದು ಅಭಿಮಾನಿ ಓಂಕಾರ್ ಅವರು ಸವಾರಿ ಮಾಡುತ್ತ, ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪುನೀತ್ ಸಮಾಧಿಗೆ ಭೇಟಿ ನೀಡಿ ಅವರು ನಮನ ಸಲ್ಲಿಸಲಿದ್ದಾರೆ.

ಓಂಕಾರ್ ಅವರು ಮೂಲತಃ ವಿಜಯಪುರದವರು. ಫೆ.26ರಂದು ಅಲ್ಲಿಂದ ಹೊರಟು ಫೆ.27ರಂದು ಅವರು ಬೆಂಗಳೂರು ತಲುಪಲಿದ್ದಾರೆ. ಅಪ್ಪು ಆಟೋಗ್ರಾಫ್ ಮತ್ತು ಭಾವಚಿತ್ರ ಇರುವ ಈ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ.

ಪುನೀತ್ ರಾಜ್ಕುಮಾರ್ ಅವರ ನೆನಪು ಎಂದಿಗೂ ಮರೆಯಾಗುವಂಥದ್ದಲ್ಲ. ಅವರನ್ನು ಅಭಿಮಾನಿಗಳು ಪ್ರತಿದಿನ ಸ್ಮರಿಸುತ್ತಾರೆ. ಅದಕ್ಕೆ ಈ ರೀತಿಯ ಸಾವಿರಾರು ಕಾರಣಗಳಿವೆ. ಒಟ್ಟಿನಲ್ಲಿ ಅಭಿಮಾನಿಗಳ ಎದೆಯಲ್ಲಿ ಅಪ್ಪು ಎಂದಿಗೂ ಅಮರ.
Published On - 11:31 am, Sat, 26 February 22