- Kannada News Photo gallery Puneeth Rajkumar Photos: Raghavendra Rajkumar shares rare pics of his brother Appu
ಎಂದಿಗೂ ಮುಗಿಯದ ಪುನೀತ್ ರಾಜ್ಕುಮಾರ್ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು
Puneeth Rajkumar Photos: ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಂದಿಗೂ ಮುಗಿಯಲಾರದಷ್ಟು ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ ಅಪ್ಪು. ಕೆಲವು ಅಪರೂಪದ ಫೋಟೋಗಳನ್ನು ರಾಘವೇಂದ್ರ ರಾಜ್ಕುಮಾರ್ ಅವರು ಹಂಚಿಕೊಂಡಿದ್ದಾರೆ.
Updated on: Nov 07, 2021 | 11:01 AM

Puneeth Rajkumar Photos: Raghavendra Rajkumar shares rare pics of his brother Appu

Puneeth Rajkumar Photos: Raghavendra Rajkumar shares rare pics of his brother Appu

ಗಾಜನೂರಿನಲ್ಲಿ ಡಾ. ರಾಜ್ಕುಮಾರ್ ಅವರು ಹುಟ್ಟಿ ಬೆಳೆದ ಮನೆ ಇದೆ. ಅದು ಅಣ್ಣಾವ್ರ ಮಕ್ಕಳ ಫೇವರಿಟ್ ಸ್ಥಳ. ಪುನೀತ್ ಕೂಡ ಅಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು.

ಅಣ್ಣಾವ್ರದ್ದು ಕಲಾವಿದರ ಕುಟುಂಬ. ಡಾ. ರಾಜ್ಕುಮಾರ್ ರೀತಿಯೇ ಅವರ ಪುತ್ರರು ಕೂಡ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಸಾಧಿಸಬೇಕಾದ್ದು ಬಹಳ ಇರುವಾಗಲೇ ಅಪ್ಪು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.

ಅಮ್ಮನ ಪ್ರೀತಿಯ ಮಗನಾಗಿದ್ದರು ಅಪ್ಪು. ಚಿಕ್ಕ ವಯಸ್ಸಿನಿಂದಲೂ ಪುನೀತ್ ರಾಜ್ಕುಮಾರ್ ಅವರ ನಟನೆಗೆ ಪಾರ್ವತಮ್ಮ ರಾಜ್ಕುಮಾರ್ ಅವರು ಸಖತ್ ಪ್ರೋತ್ಸಾಹ ನೀಡುತ್ತಿದ್ದರು.

ರಾಘವೇಂದ್ರ ರಾಜ್ಕುಮಾರ್ ಅವರು ಅನಾರೋಗ್ಯದ ಬಳಿಕ ಚೇತರಿಸಿಕೊಂಡು ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದಾಗ ಪುನೀತ್ ರಾಜ್ಕುಮಾರ್ ತುಂಬ ಖುಷಿಪಟ್ಟಿದ್ದರು. ಸಹೋದರನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಆದರೆ ಇಂದು ಅಪ್ಪು ನಮ್ಮೊಂದಿಗಿಲ್ಲ.

ಪಾರ್ವತಮ್ಮ ರಾಜ್ಕುಮಾರ್ ಅವರ ಕುರಿತು ಪುಸ್ತಕ ಬರೆಯಬೇಕು ಎಂದು ಪುನೀತ್ ಆಸೆ ಇಟ್ಟುಕೊಂಡಿದ್ದರು. ಚಿತ್ರರಂಗದಲ್ಲಿ ತಮ್ಮ ತಾಯಿ ಮಾಡಿದ ಸಾಧನೆಗಳನ್ನು ಆ ಪುಸ್ತಕದಲ್ಲಿ ವಿವರಿಸುವುದು ಅವರ ಉದ್ದೇಶವಾಗಿತ್ತು. ಆ ಕೆಲಸವನ್ನೆಲ್ಲ ಬಿಟ್ಟು ಅಪ್ಪು ಬಾರದ ಊರಿಗೆ ಹೋಗಿದ್ದಾರೆ.




