Trademark Song: ‘ಟ್ರೇಡ್ಮಾರ್ಕ್’ನಲ್ಲಿದೆ ಹಲವು ಅಪರೂಪದ ದೃಶ್ಯಗಳು; ಹಾಡಿನ ವಿಶೇಷ ಸ್ಟಿಲ್ಗಳು ಇಲ್ಲಿವೆ
James | Puneeth Rajkumar: ಪುನೀತ್ ರಾಜ್ಕುಮಾರ್ ಅಭಿನಯದ ‘ಜೇಮ್ಸ್’ನ ‘ಟ್ರೇಡ್ಮಾರ್ಕ್’ ಹಾಡು ರಿಲೀಸ್ ಆಗಿದೆ. ಹಲವು ಸರ್ಪ್ರೈಸ್ಗಳನ್ನು ಹೊತ್ತುತಂದಿರುವ ಈ ಹಾಡನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಹಾಡಿನಲ್ಲಿ ಶೂಟಿಂಗ್ ಸಂದರ್ಭದ್ದೂ ಸೇರಿದಂತೆ ವಿಶೇಷ ತುಣುಕುಗಳಿವೆ. ಅವುಗಳ ಸ್ಟಿಲ್ಗಳು ಇಲ್ಲಿವೆ.
Updated on: Mar 01, 2022 | 2:28 PM

ಪುನೀತ್ ರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ ‘ಜೇಮ್ಸ್’ ಚಿತ್ರದ ಹೊಸ ಹಾಡು ರಿಲೀಸ್ ಆಗಿದೆ.

‘ಟ್ರೇಡ್ಮಾರ್ಕ್’ ಹಾಡು ಉತ್ತಮ ವೀಕ್ಷಣೆ ಕಾಣುತ್ತಿದ್ದು, ಹಲವು ಸರ್ಪ್ರೈಸ್ಗಳನ್ನು ಹೊತ್ತುತಂದಿದೆ.

ಹಾಡಿನ ಪ್ರಾರಂಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕ್ಲಾಪ್ ಮಾಡುತ್ತಿರುವ ದೃಶ್ಯವಿದೆ.

‘ಟ್ರೇಡ್ಮಾರ್ಕ್’ನಲ್ಲಿ ‘ಜೇಮ್ಸ್ ಚಿತ್ರದ ಶೂಟಿಂಗ್ ಸಂದರ್ಭದ ಚಿತ್ರಗಳು, ಫೋಟೋಗಳು, ಮೇಕಿಂಗ್ ವಿಡಿಯೋಗಳಿವೆ.

ಕನ್ನಡದ ಖ್ಯಾತ ತಾರೆಯರು ಕೂಡ ಈ ಹಾಡಿನಲ್ಲಿ ಹೆಜ್ಜೆ ಹಾಕಿರೋದು ವಿಶೇಷ.

ಅದ್ದೂರಿ ಸೆಟ್ಗಳಲ್ಲಿ ಜೇಮ್ಸ್ ಹಾಡುಗಳ ಚಿತ್ರೀಕರಣವಾಗಿರುವ ಝಲಕ್ಅನ್ನು ಈ ಲಿರಿಕಲ್ ವಿಡಿಯೋ ಕಟ್ಟಿಕೊಟ್ಟಿದೆ.

ಪುನೀತ್ ಕೂಡ ಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದು, ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ.

ಎಂಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್ಕುಮಾರ್ ಹಾಗೂ ಚರಣ್ರಾಜ್ ಈ ಗೀತೆಯನ್ನು ಹಾಡಿದ್ದಾರೆ.

ರಚಿತಾ ರಾಮ್ ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.

ಸ್ಯಾಂಡಲ್ವುಡ್ನ ಮತ್ತೋರ್ವ ನಟಿ ಆಶಿಕಾ ರಂಗನಾಥ್ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಬಹುಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ನಟಿ ಶ್ರೀಲೀಲಾ ಕೂಡ ‘ಟ್ರೇಡ್ಮಾರ್ಕ್’ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಟ್ರೇಡ್ಮಾರ್ಕ್’ನಲ್ಲಿ ಪುನೀತ್

ಮಾರ್ಚ್ 17ರಂದು ಪುನೀತ್ ಜನ್ಮದಿನ. ಅಂದೇ 5 ಭಾಷೆಗಳಲ್ಲಿ ‘ಜೇಮ್ಸ್’ ತೆರೆಕಾಣಲಿದೆ.

TV9 Kannada
Read More



