Updated on: May 07, 2023 | 11:23 AM
ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಪ್ರತಿ ವೀಕೆಂಡ್ನಲ್ಲೂ ಅವರು ಹೊಸ ಫೋಟೋಸ್ ಅಪ್ಲೋಡ್ ಮಾಡುತ್ತಾರೆ.
ಈಗ ರಾಧಿಕಾ ಪಂಡಿತ್ ಅವರು ಮಗಳು ಆಯ್ರಾ ಜೊತೆ ಇರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆ ಅವರು ಬರೆದುಕೊಂಡಿರುವ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.
ಅಮ್ಮನ ಜೊತೆ ಫೋಟೋಗೆ ಪೋಸ್ ನೀಡಲು ಆಯ್ರಾ ಬಿಲ್ಕುಲ್ ತಯಾರಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಆಕೆ ಕ್ಯಾಮೆರಾ ಕಡೆ ಸರಿಯಾಗಿ ನೋಡುತ್ತಲೇ ಇಲ್ಲ. ಆ ರೀತಿಯ ಕೆಲವು ಫೋಟೋಗಳನ್ನು ರಾಧಿಕಾ ಅವರು ಅಭಿಮಾನಿಗಳಿಗೆ ತೋರಿಸಿದ್ದಾರೆ.
ಆಯ್ರಾ ಸರಿಯಾಗಿ ಪೋಸ್ ನೀಡುವ ಬದಲು ಎತ್ತೆತ್ತಲೋ ನೋಡಿದ್ದಾಳೆ. ವಿಚಿತ್ರವಾಗಿ ಮುಖಭಾವಗಳನ್ನು ತೋರಿಸಿದ್ದಾಳೆ. ಫೋಟೋಗಾಗಿ ಎಷ್ಟೆಲ್ಲ ಕಷ್ಟಪಡಬೇಕು ಎಂಬುದನ್ನು ಈ ಪೋಸ್ಟ್ ಮೂಲಕ ರಾಧಿಕಾ ಪಂಡಿತ್ ವಿವರಿಸಿದ್ದಾರೆ.
ವಿಶೇಷ ಎಂದರೆ ಇದೇ ರೀತಿಯ ಒಂದು ಫೋಟೋವನ್ನು ರಾಧಿಕಾ ಪಂಡಿತ್ ಅವರು ಈ ಹಿಂದೆ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಯಶ್ ಕೂಡ ಆಯ್ರಾ ರೀತಿಯೇ ಮಾಡಿದ್ದರು. ಒಂದು ಸೆಲ್ಫಿಗಾಗಿ ರಾಧಿಕಾ ಸಖತ್ ಸರ್ಕಸ್ ಮಾಡಬೇಕಿತ್ತು.
ಈಗ ಆಯ್ರಾ ಜೊತೆ ರಾಧಿಕಾ ಪಂಡಿತ್ ಅವರು ಹಂಚಿಕೊಂಡ ಫೋಟೋ ನೋಡಿದರೆ ಯಶ್ ಜೊತೆಗಿನ ಆ ಹಳೇ ಫೋಟೋ ನೆನಪಾಗುತ್ತದೆ. ಹಾಗಾಗಿ ಈ ಎರಡೂ ಸಂಗತಿಗಳನ್ನು ರಾಧಿಕಾ ಅವರು ಮತ್ತೆ ನೆನಪಿಸಿಕೊಂಡಿದ್ದಾರೆ.