- Kannada News Photo gallery Radhika Pandit shares rare photos of Yash Ayra and Yatharv to celebrate father's day
Father’s Day: ಅಪ್ಪಂದಿರ ದಿನಕ್ಕೆ ವಿಶೇಷ ಫೋಟೋಸ್ ಹಂಚಿಕೊಂಡ ರಾಧಿಕಾ ಪಂಡಿತ್
Radhika Pandit Photos: ನಟಿ ರಾಧಿಕಾ ಪಂಡಿತ್ ಅವರು ಅಪ್ಪಂದಿರ ದಿನದ ಪ್ರಯುಕ್ತ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ವೈರಲ್ ಆಗಿವೆ.
Updated on: Jun 18, 2023 | 12:49 PM

ಇಂದು (ಜೂನ್ 18) ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ. ತಂದೆಯ ಜೊತೆಗಿನ ಬಾಂಧವ್ಯವನ್ನು ಎಲ್ಲರೂ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಚಂದನವನದ ಸೆಲೆಬ್ರಿಟಿಗಳು ಕೂಡ ಅಪ್ಪಂದಿರ ದಿನವನ್ನು ಆಚರಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಪ್ಪಂದಿರ ದಿನದ ಪ್ರಯುಕ್ತ ಅವರು ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ವೈರಲ್ ಆಗಿವೆ.

‘ನಾನೆಂದೂ ತಂದೆಯ ಮಗಳು. ಎಲ್ಲದಕ್ಕೂ ಅವರ ಬಳಿಯೇ ಓಡುವವಳು ನಾನು. ಅವರೇ ನನ್ನ ಮಾರ್ಗದರ್ಶಿ, ಆಧಾರಸ್ಥಂಭ ಮತ್ತು ನನ್ನ ಹೀರೋ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.

‘ಈಗ ಆಯ್ರಾ ಮತ್ತು ಯಥರ್ವ್ ಕೂಡ ತಂದೆಯ ಜೊತೆ ಅದೇ ರೀತಿ ಬಾಂಧವ್ಯ ಹೊಂದಿರುವುದು ನೋಡಲು ಖುಷಿ ಆಗುತ್ತದೆ’ ಎಂದು ಬರೆದುಕೊಂಡಿರುವ ರಾಧಿಕಾ ಪಂಡಿತ್ ಅವರು ಈ ಫೋಟೋಸ್ ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಮೂಲಕ ರಾಧಿಕಾ ಪಂಡಿತ್ ಅವರು ‘ಅಪ್ಪಂದಿರ ದಿನದ’ ಶುಭಾಶಯ ತಿಳಿಸಿದ್ದಾರೆ. ಕಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಕೂಡ ಈ ದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ.




