ಅಪರೂಪಕ್ಕೆ ಪೂರ್ಣ ಬಟ್ಟೆಗಳಲ್ಲಿ ಕಾಣಿಸಿಕೊಂಡ ರಣ್ವೀರ್ ಸಿಂಗ್: ಹಿಂದಿರುವ ಮಹಿಳೆ ಯಾರು?
Ranveer Singh: ಅಪರೂಪಕ್ಕೆ ತುಸು ಡೀಸೆಂಟ್ ಎನ್ನಬಹುದಾದ ಉಡುಗೆ ತೊಟ್ಟು ಕಾಣಿಸಿಕೊಂಡಿದ್ದಾರೆ ರಣ್ವೀರ್ ಸಿಂಗ್. ಅವರ ಹಿಂದಿರುವ ಕೈ ಯಾರದ್ದು?
Updated on: Jul 01, 2023 | 8:38 AM

ಸದಾ ಚಿತ್ರ ವಿಚಿತ್ರ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವ ರಣ್ವೀರ್ ಸಿಂಗ್ ಈ ಬಾರಿ ಯಾಕೋ ಅರೆ ಡೀಸೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಶರ್ಟ್ ಕಳಚಿ ಫೋಸು ನೀಡುವುದು ರಣ್ವೀರ್ ಸಿಂಗ್ಗೆ ಸಾಮಾನ್ಯ ಆದರೆ ಹೊಸ ಫೋಟೊಶೂಟ್ನಲ್ಲಿ ಅದನ್ನೂ ಮಾಡಿಲ್ಲ.

ಕಪ್ಪು ಜಾಕೆಟ್ ಮಾದರಿಯ ಶರ್ಟ್ ಧರಿಸಿ ಮಿಂಚಿದ್ದಾರೆ ರಣ್ವೀರ್ ಸಿಂಗ್, ಆದರೆ ರಣ್ವೀರ್ ಹಿಂದೆ ಯಾವುದೋ ಮಹಿಳೆಯ ಕೈಯಿದೆ ಯಾರದು?

ರಣ್ವೀರ್ ಸಿಂಗ್ ನಟನೆಯ ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆ ಆಲಿಯಾ ಭಟ್ ನಟಿಸಿದ್ದಾರೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶನ ಮಾಡಿದ್ದು, ಆ ಸಿನಿಮಾದ ನಿರ್ಮಾಣವನ್ನು ಅವರೇ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್, ಒಂದು ದೊಡ್ಡ ಬಾಕ್ಸಾಫೀಸ್ ಗೆಲುವಿಗೆ ಎದುರು ನೋಡುತ್ತಿದ್ದಾರೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



