Updated on: Apr 30, 2023 | 12:16 PM
ನಟಿ ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರು ‘ರೇನ್ ಬೋ’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿರುವುದಾಗಿ ಗುಡ್ ನ್ಯೂಸ್ ನೀಡಿದ್ದಾರೆ. ಆ ಬಗ್ಗೆ ಅಪ್ಡೇಟ್ ಇಲ್ಲಿದೆ.
ಸಿನಿಮಾ ಕೆಲಸಗಳನ್ನು ಮುಗಿಸುವಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಅವರು ಸಖತ್ ಫಾಸ್ಟ್ ಆಗಿದ್ದಾರೆ. ಒಂದೆಡೆ ‘ಪುಷ್ಪ 2’ ಸಿನಿಮಾದ ಶೂಟಿಂಗ್ ಹಾಗೂ ಇನ್ನೊಂದೆಡೆ ‘ರೇನ್ ಬೋ’ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.
‘ರೇನ್ ಬೋ’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಯಿತು ಎಂಬುದನ್ನು ತಿಳಿಸಲು ರಶ್ಮಿಕಾ ಮಂದಣ್ಣ ಅವರು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ದೇವ್ ಮೋಹನ್ ಜೊತೆಗಿನ ಸೆಲ್ಫಿಯನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ಇಡೀ ಕುಟುಂಬದ ಬೆಂಬಲ ಇದೆ. ‘ರೇನ್ ಬೋ’ ಶೂಟಿಂಗ್ ನೋಡಲು ರಶ್ಮಿಕಾ ಸಹೋದರಿ ಕೂಡ ಬಂದಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ಇದು.
ಫ್ಯಾಮಿಲಿ ಜೊತೆ ಕಾಲ ಕಳೆಯುವ ಸಂದರ್ಭವನ್ನು ರಶ್ಮಿಕಾ ಮಂದಣ್ಣ ತುಂಬ ಎಂಜಾಯ್ ಮಾಡುತ್ತಾರೆ. ಸದಾ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಆಗಿರುವ ಅವರು, ಕೆಲಸದ ಬಿಡುವಿನಲ್ಲಿ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ.