ಗ್ಲಾಮರಸ್ ಫೋಟೋ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ ಮಂದಣ್ಣ

Updated on: Apr 07, 2026 | 5:40 PM

‘ಕಾಕ್ಟೇಲ್’ ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್ ಆಗಿರುವ ‘ಕಾಕ್ಟೇಲ್ 2’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಅವರ ಜೊತೆ ಶಾಹಿದ್ ಕಪೂರ್, ಕೃತಿ ಸನನ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದ ಹೊಸ ಫೋಟೋಗಳು ಗಮನ ಸೆಳೆಯುತ್ತಿವೆ. ಫೋಟೋ ಗ್ಯಾಲರಿ ಇಲ್ಲಿದೆ..

1 / 5
ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್​ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರು ನಟಿಸುತ್ತಿರುವ ‘ಕಾಕ್ಟೇಲ್ 2’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.

ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್​ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರು ನಟಿಸುತ್ತಿರುವ ‘ಕಾಕ್ಟೇಲ್ 2’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.

2 / 5

‘ಕಾಕ್ಟೇಲ್ 2’ ಸಿನಿಮಾದ ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಿಂದ ಹೊಸ ಹಾಡು ರಿಲೀಸ್ ಆಗಲಿದೆ.

3 / 5

ರಶ್ಮಿಕಾ ಮಂದಣ್ಣ ಜೊತೆ ಬಾಲಿವುಡ್ ಬೆಡಗಿ ಕೃತಿ ಸನನ್ ಕೂಡ ಅಭಿನಯಿಸುತ್ತಿದ್ದಾರೆ. ಅವರ ಪಾತ್ರ ಕೂಡ ಸಖತ್ ಬೋಲ್ಡ್ ಆಗಿದೆ. ಪಡ್ಡೆ ಹುಡುಗರ ಕಣ್ಣು ಕುಕ್ಕವ ರೀತಿಯಲ್ಲಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ.

4 / 5

ಕೃತಿ ಸನನ್ ಅವರ ಅಭಿಮಾನಿಗಳಲ್ಲಿ ‘ಕಾಕ್ಟೇಲ್ 2’ ಸಿನಿಮಾ ಬಗ್ಗೆ ಕೌತುಕ ಮೂಡಿದೆ. ಈ ಸಿನಿಮಾದಲ್ಲಿ ಡಿಫರೆಂಟ್ ಕಥೆ ಇರಲಿದೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.

5 / 5

ಶಾಹಿದ್ ಕಪೂರ್ ಅವರು ‘ಕಾಕ್ಟೇಲ್ 2’ ಸಿನಿಮಾಗೆ ಹೀರೋ. ಈ ಚಿತ್ರದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರ ಪಾತ್ರಗಳ ನಡುವಿನ ಕಹಾನಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us