ಕೊಡವ ಶೈಲಿಯಲ್ಲಿ ಸೀರೆ ಉಟ್ಟು ಗಮನ ಸೆಳೆದ ರಶ್ಮಿಕಾ ಮಂದಣ್ಣ

Updated on: Apr 10, 2026 | 11:55 AM

ರಶ್ಮಿಕಾ ಮಂದಣ್ಣ ಅವರು ವಿವಾಹದ ಬಳಿಕ ಮೊದಲ ಬಾರಿಗೆ ಪತಿ ವಿಜಯ್ ದೇವರಕೊಂಡ ಜೊತೆ ಕೊಡಗಿಗೆ ಬಂದಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಖುಷಿ ಖುಷಿಯಿಂದ ಅವರು ಸಮಯ ಕಳೆದಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. 

1 / 6
ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಅವರು ಉದಯಪುರದಲ್ಲಿ ವಿವಾಹ ಆದರು. ಆ ಬಳಿಕ ಹೈದರಾಬಾದ್​​​ನಲ್ಲಿ ರಿಸೆಪ್ಶನ್ ನಡೆಯಿತು. ಈಗ ರಶ್ಮಿಕಾ ಮಂದಣ್ಣ ಅವರು ಕೊಡಗಿಗೆ ಬಂದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಅವರು ಉದಯಪುರದಲ್ಲಿ ವಿವಾಹ ಆದರು. ಆ ಬಳಿಕ ಹೈದರಾಬಾದ್​​​ನಲ್ಲಿ ರಿಸೆಪ್ಶನ್ ನಡೆಯಿತು. ಈಗ ರಶ್ಮಿಕಾ ಮಂದಣ್ಣ ಅವರು ಕೊಡಗಿಗೆ ಬಂದಿದ್ದಾರೆ.

2 / 6

ಪತಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಕೊಡಗನ್ನು ಸುತ್ತಿದ್ದಾರೆ. ಆ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಬರ್ತ್​ಡೇ ಸಂದರ್ಭದಲ್ಲೇ ರಶ್ಮಿಕಾ ಕೊಡಗಿಗೆ ಬಂದಿದ್ದು ವಿಶೇಷ.

3 / 6

ರಶ್ಮಿಕಾ ಮಂದಣ್ಣ ಅವರು ತಂಗಿ ಜೊತೆ ಸ್ಕೂಲ್ ಎದುರು ಪೋಸ್ ಕೊಟ್ಟಿದ್ದಾರೆ. ಅದರ ಫೋಟೋನ ರಶ್ಮಿಕಾ ಹಂಚಿಕೊಂಡಿದ್ದಾರೆ. ರಶ್ಮಿಕಾ ಹಾಗೂ ಅವರ ತಂಗಿ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ.

4 / 6

ರಶ್ಮಿಕಾ ಮಂದಣ್ಣ ಮೊಗದಲ್ಲಿ ಯಾವಾಗಲೂ ನಗು ಮಾಸುವುದಿಲ್ಲ. ಅದಕ್ಕೆ ಈ ಫೋಟೋಗಳೇ ಸಾಕ್ಷಿ. ಅವರು ಸದಾ ನಗಲು ಪ್ರಯತ್ನಿಸುತ್ತಾ ಇರುತ್ತಾರೆ. ಅವರ ನಗು ಎಂದಿಗೂ ಮಾಸುವುದಿಲ್ಲ.

5 / 6

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಪ್ರೀತಿಸಿ ಮದುವೆ ಆದವರು. ಇಬ್ಬರೂ ಪ್ರೀತಿಯಲ್ಲಿ ಇದ್ದಾಗ ವಿಜಯ್ ಅವರು ಕೊಡಗಿಗೆ ಬಂದಿದ್ದರೇ ಎನ್ನುವ ಪ್ರಶ್ನೆ ಕೂಡ ಅನೇಕರಲ್ಲಿದೆ.

6 / 6

ರಶ್ಮಿಕಾ ಅವರು ಫ್ಯಾಮಿಲಿ ಜೊತೆ ಸಮಯ ಕಳೆದಿದ್ದಾರೆ. ಅವರು ಸಿನಿಮಾದಲ್ಲಿ ಬ್ಯುಸಿ ಇರುವುದರಿಂದ ಕೊಡಗಿಗೆ ಬರುವುದಕ್ಕೆ ಹೆಚ್ಚು ಸಮಯ ಸಿಗೋದಿಲ್ಲ.

Loading...
Unable to load recommendations.
Follow Us