- Kannada News Photo gallery Rashmika Mandanna to start shooting for Pushpa 2 in February with Allu Arjun
Rashmika Mandanna: ‘ಪುಷ್ಪ 2’ ಸಿನಿಮಾದ ಶೂಟಿಂಗ್ ಬಗ್ಗೆ ಅಪ್ಡೇಟ್ ನೀಡಿದ ನಟಿ ರಶ್ಮಿಕಾ ಮಂದಣ್ಣ
Rashmika Mandanna | Pushpa 2: ರಶ್ಮಿಕಾ ಮಂದಣ್ಣ ಅವರು ‘ವಾರಿಸು’ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ಅವರು ‘ಪುಷ್ಪ 2’ ಚಿತ್ರದ ಶೂಟಿಂಗ್ಗಾಗಿ ಸಜ್ಜಾಗುತ್ತಿದ್ದಾರೆ.
Updated on: Jan 17, 2023 | 4:25 PM

ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಪಷ್ಪ’ ಸಿನಿಮಾದಿಂದ ಸಿಕ್ಕ ಗೆಲುವು ಬಹಳ ದೊಡ್ಡದು. ಈ ಚಿತ್ರದ ಸೀಕ್ವೆಲ್ನಲ್ಲಿಯೂ ಅವರ ಪಾತ್ರ ಮುಂದುವರಿಯಲಿದೆ. ಅದರಿಂದ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.

ಕಾರಣಾಂತರಗಳಿಂದ ‘ಪುಷ್ಪ 2’ ಸಿನಿಮಾದ ಶೂಟಿಂಗ್ ತಡವಾಗುತ್ತಲೇ ಇತ್ತು. ಆದರೆ ಈಗ ಚಿತ್ರೀಕರಣ ಆರಂಭ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ರಶ್ಮಿಕಾ ಕಡೆಯಿಂದ ಹೊಸ ಅಪ್ಡೇಟ್ ಸಿಕ್ಕಿದೆ.

‘ಚಿತ್ರತಂಡದವರು ಈಗಾಗಲೇ ಶೂಟಿಂಗ್ ಶುರು ಮಾಡಿದ್ದಾರೆ. ನಾನು ಫೆಬ್ರವರಿಯಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ’ ಎಂದು ರಶ್ಮಿಕಾ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾದಲ್ಲಿ ಮಿಂಚಿದ್ದರು. ಈಗ ಸೀಕ್ವೆಲ್ನಲ್ಲಿ ಅವರ ಪಾತ್ರ ಯಾವೆಲ್ಲ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ರಶ್ಮಿಕಾ ಮಂದಣ್ಣ ನಿಭಾಯಿಸಿದ ಶ್ರೀವಲ್ಲಿ ಪಾತ್ರ ಜನಮನ ಗೆದ್ದಿದೆ. 2ನೇ ಪಾರ್ಟ್ನಲ್ಲಿ ಆ ಪಾತ್ರದ ಸ್ಕ್ರೀನ್ ಸ್ಪೇನ್ ಕಡಿಮೆ ಇರಲಿದೆ ಎಂಬ ಗಾಸಿಪ್ ಕೂಡ ಹರಿದಾಡಿದೆ. ಆ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.









