AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಉತ್ತಮ ದಾಂಪತ್ಯ ಜೀವನಕ್ಕಾಗಿ ಹೊಂದಾಣಿಕೆಯ ಟಿಪ್ಸ್​​

ಸಂಬಂಧದ ಸಲಹೆಗಳು: ವೈವಾಹಿಕ ಜೀವನದಲ್ಲಿ ಪ್ರೀತಿ ತುಂಬಾ ಸುಂದರವಾಗಿರುತ್ತದೆ. ಮೊದಮೊದಲು ಕೆಲವರು ತಮ್ಮ ಸಂಗಾತಿಯ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಸಮಯ ಕಳೆದಂತೆ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಸುಂದರ ಸಂಬಂಧ ದುರ್ಬಲವಾಗುತ್ತದೆ.

Rakesh Nayak Manchi
|

Updated on:Jul 23, 2023 | 3:43 PM

Share
Relationship tips Adjustments to be followed for a good married life

ವೈವಾಹಿಕ ಜೀವನದಲ್ಲಿ ಪ್ರೀತಿ ತುಂಬಾ ಸುಂದರವಾಗಿರುತ್ತದೆ. ಮೊದಲ ಮೊದಲು ಅನೇಕರು ತಮ್ಮ ಸಂಗಾತಿಯ ಬಗ್ಗೆ ವಿಶೇಷ ಗಮನ, ಕಾಳಜಿ ವಹಿಸುತ್ತಾರೆ. ಸಮಯ ಕಳೆದಂತೆ ಇದು ಕಡಿಮೆಯಾಗುತ್ತಾ ಬಂದು ಸಂಬಂಧ ದುರ್ಬಲವಾಗುತ್ತದೆ. ಆದ್ದರಿಂದ, ಸಂಬಂಧದಲ್ಲಿ ಬಂಧವನ್ನು ಬಲಪಡಿಸಲು ಇಬ್ಬರೂ ಶ್ರಮಿಸಬೇಕು. ಜವಾಬ್ದಾರಿಗಳೊಂದಿಗೆ ಒತ್ತಡವೂ ಹೆಚ್ಚಾಗುತ್ತದೆ. ಸಣ್ಣ ಜಗಳಗಳು ದೊಡ್ಡ ಜಗಳಗಳಾಗುತ್ತವೆ. ಭಾವೋದ್ರೇಕಗಳು ಹೆಚ್ಚಾಗುತ್ತವೆ. ಹೀಗಾಗಿ ಸಂಬಂಧವನ್ನು ದುರ್ಬಲಗೊಳಿಸದೆ ಉತ್ತಮವಾಗಿ ವೈವಾಹಿಕ ಜೀವನ ನಡೆಸಲು ಕೆಲವೊಂದು ಹೊಂದಾಣಿಕೆಗಳನ್ನು ಮಾಡಬೇಕು. ಅವುಗಳು ಈ ಕೆಳಗಿನಂತಿವೆ.

1 / 5
Relationship tips Adjustments to be followed for a good married life

ಪರಸ್ಪರ ಸಮಯ ಕಳೆಯುವುದು: ಬ್ಯುಸಿ ಜೀವನದ ಜಂಜಾಟದ ನಡುವೆಯೂ ದಾಂಪತ್ಯ ಜೀವನಕ್ಕಾಗಿ ಕೊಂಚ ಸಮಯ ಮೀಸಲಿಟ್ಟು ಒಟ್ಟುಗೆ ಸಮಯ ಕಳೆಯಬೇಕು. ಇಂತಯ ನಿಯಮ ನವ ಜೀವನ ಆರಂಭವಾದಗ ಇರುತ್ತದೆ. ನಂತರ ಕಡಿಮೆಯಾಗುತ್ತಾ ಹೋಗುತ್ತದೆ. ಇದು ದಾಂಪತ್ಯದಲ್ಲಿ ಬಿರುಕು ಉಂಟು ಮಾಡುತ್ತದೆ. ಇಬ್ಬರು ಖಾಸಗಿಯಾಗಿ ಸಮಯ ಕಳೆದಾಗ ತಮ್ಮಲ್ಲಿನ ಭಾವನೆಗಳನ್ನು ಹಂಚಿಕೊಳ್ಳಬಹುದು. ಇದರಿಂದ ಮನಸ್ಸಿಗೆ ಉಲ್ಲಾಸವಾಗುತ್ತದೆ. ಒಂದೊಮ್ಮೆ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಬಹುದು. ಇದರಿಂದ ಸಂಬಂಧ ಸುಧಾರಿಸಲು ಸಹಾಯಕವಾಗುತ್ತದೆ.

2 / 5
Relationship tips Adjustments to be followed for a good married life

ಕೋಪವನ್ನು ತೋರಿಸಬೇಡಿ: ಅನೇಕ ಜನರು ಒಬ್ಬರ ಕೋಪವನ್ನು ಇನ್ನೊಬ್ಬರ ಮೇಲೆ ವ್ಯಕ್ತಪಡಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲೂ ಗಂಡ-ಹೆಂಡತಿ ನಡುವೆ ಇದು ಸಾಮಾನ್ಯ. ಕೆಲವರು ಕಚೇರಿ ಕೆಲಸದ ಒತ್ತಡದ ಸೇಡನ್ನು ಸಂಗಾತಿಯಲ್ಲಿ ತೋರಿಸುತ್ತಾರೆ. ನೀವೂ ಹೀಗೆ ಮಾಡುತ್ತಿದ್ದರೆ ನಿಮ್ಮ ಸಂಬಂಧ ಹಾಳಾಗಬಹುದು. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯಿಂದ ಮಾತನಾಡಿ. ಕಚೇರಿ ವಿಚಾರ ಕಚೇರಿಯಲ್ಲಿ ಬಿಟ್ಟು ಬನ್ನಿ.

3 / 5
Relationship tips Adjustments to be followed for a good married life

ಜಗಳವಾದಾಗ ದೂರ ಸರಿಯಬೇಡಿ: ದಂಪತಿಗಳಲ್ಲಿ ಜಗಳವಾಗುವುದು ಸಹಜ. ಆದರೆ ಮಾತನಾಡದೇ ಕುಳಿತುಕೊಳ್ಳುವುದು ದೊಡ್ಡ ತಪ್ಪು. ನೀವು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳಿ ಅಥವಾ ಸಂಗಾತಿ ತಪ್ಪು ಮಾಡಿದ್ದರೆ ಕ್ಷಮಿಸಿ ಮತ್ತು ವಿಚಾರ ಮಾಡಿಕೊಳ್ಳಿ.

4 / 5
Relationship tips Adjustments to be followed for a good married life

ಒಬ್ಬಂಟಿ ಪ್ರವಾಸ ಬೇಡ: ವಾರಾಂತ್ಯದಲ್ಲಿ ಕಚೇರಿ ಕೆಲಸಕ್ಕೆ ಗುಡ್​ಬೈ ಹೇಳಿಬಿಡಿ. ವಾರಾಂತ್ಯದಲ್ಲಿ ಅಥವಾ ರಜೆಯ ಸಂದರ್ಭದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಒಟ್ಟಿಗೆ ಊಟಕ್ಕೆ ಹೋಗಿ ಅಥವಾ ಪಾರ್ಕ್‌ಗಳಿಗೆ ಭೇಟಿ ನೀಡಿ. ಲಾಂಗ್ ರೈಡ್ ಕೂಡ ಹೋಗಬಹುದು. ಇದು ದಾಂಪತ್ಯ ಜೀವನದಲ್ಲಿನ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ.

5 / 5

Published On - 3:43 pm, Sun, 23 July 23

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ