AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟು ನಿಂತ ಆಟೋದಲ್ಲಿ ಕಂತೆ ಕಂತೆ ನೋಟು; ಯಾವ ಪಕ್ಷಕ್ಕೆ ಸೇರಿದ್ದು? ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಎಸ್​ಜೆ ಪಾರ್ಕ್ ಪೊಲೀಸ್ ಠಾಣೆ ಬಳಿ ಒಂದು ಕೋಟಿ ನಗದು ಪತ್ತೆ ಪ್ರಕರಣ ಸಂಬಂಧ ಎಸ್​ಜೆ ಪಾರ್ಕ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿರುವಾಗ ಸತ್ಯಸಂಗತಿಯೊಂದು ಹೊರಬಿದ್ದಿದೆ. ರಾಜಕೀಯ ನಾಯಕರೊಬ್ಬರಿಗೆ ಸೇರಿದ ಹಣ ಇದಾಗಿದೆ ಎಂದು ತಿಳಿದುಬಂದಿದೆ.

Rakesh Nayak Manchi
|

Updated on:Apr 16, 2023 | 8:27 PM

Share
Rs 1 crore seized by police from auto near SJ Park police station belongs to BJP

ಬೆಂಗಳೂರು ನಗರದ ಎಸ್​ಜೆ ಪಾರ್ಕ್ ಪೊಲೀಸ್ ಠಾಣೆ ಬಳಿ ಒಂದು ಕೋಟಿ ನಗದು ಪತ್ತೆ ಪ್ರಕರಣ ಸಂಬಂಧ ಪೊಲೀಸ್ ವಿಚಾರಣೆ ವೇಳೆ ಹವಾಲ ಮೂಲಕ ಹಣ ರವಾನೆ ಮಾಡಿತ್ತಿದ್ದ ವಿಚಾರ ಬಯಲಿಗೆ ಬಂದಿದೆ.

1 / 5
Rs 1 crore seized by police from auto near SJ Park police station belongs to BJP

ಬೆಂಗಳೂರಿನ ವಿಜಯ ನಗರದಿಂದ ಜಯನಗರಕ್ಕೆ ರವಾನೆ ಮಾಡುತ್ತಿದ್ದಾಗ ಎಸ್​ಜೆ ಪಾರ್ಕ್ ಪೊಲೀಸ್ ಠಾಣೆ ಬಳಿ ಆಟೋ ಕೆಟ್ಟು ನಿಂತಿದೆ. ಇದನ್ನು ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಕೋಟಿ ರೂಪಾಯಿ ಪತ್ತೆಯಾಗಿತ್ತು. ಕೂಡಲೇ ಆಟೋದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದರು.

2 / 5
Rs 1 crore seized by police from auto near SJ Park police station belongs to BJP

ಸುರೇಶ್ ಮತ್ತು ಪ್ರವೀಣ್ ಎಂಬುವವರು ಹಣ ಸಾಗಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದವರಾಗಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ಬಿಜೆಪಿ ಪಾರ್ಟಿಗೆ ಸೇರಿದ ಹಣ ಎಂದು ತಿಳಿದುಬಂದಿದೆ. ಬಿಜೆಪಿ ನಾಯಕರೊಬ್ಬರಿಗೆ ತಲುಪಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.

3 / 5
Rs 1 crore seized by police from auto near SJ Park police station belongs to BJP

ಸದ್ಯ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಐಟಿ ಮತ್ತು ಇಡಿಗೆ ರವಾನೆ ಮಾಡಿದ್ದು, ಐಟಿ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಇತ್ತ ಇಡಿ ಅಧಿಕಾರಿಗಳು ಹವಾಲ ಬಗ್ಗೆ ಪರಿಶೀಲನೆ ನಡೆಸುತಿದ್ದಾರೆ.

4 / 5
Rs 1 crore seized by police from auto near SJ Park police station belongs to BJP

ಆಟೋದಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದವರು ಕೇವಲ ಕೆಲಸಗಾರರಾಗಿದ್ದಾರೆ. ಅವರಿಗೆ ಹಣ ತಲುಪಿಸುವ ಕೆಲಸ ಮಾತ್ರ ನೀಡಲಾಗಿತ್ತು. ಅದನ್ನು ಹೊರತುಪಡಿಸಿ ಹಣದ ಬೇರೆ ಮಾಹಿತಿ ಲಭ್ಯವಿಲ್ಲ. ಈ ಪ್ರಕರಣದಿಂದ ಚುನಾವಣೆಯಲ್ಲಿ ಹವಾಲ ಮೂಲಕ ಹಣಕಾಸು ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದ ಹಿನ್ನಲೆ ಕೇಂದ್ರ ಸಂಸ್ಥೆಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

5 / 5

Published On - 8:27 pm, Sun, 16 April 23

Follow Us
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ