
ನಟಿ ಸಮಂತಾ ಅವರು ಟಾಲಿವುಡ್ನ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ ಅವರು ಹೆಜ್ಜೆ ಹಾಕಿದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ಸೂಪರ್ ಹಿಟ್ ಆಗಿದೆ. ಇದರಿಂದ ಸಮಂತಾಗೆ ವಿಶೇಷ ಸಾಂಗ್ಗೆ ಹೆಜ್ಜೆ ಹಾಕುವಂತೆ ಬೇಡಿಕೆ ಬರುತ್ತಿದೆ.

ಸಮಂತಾ ಅವರು ಕೇವಲ ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಂಡಿಲ್ಲ. ಅನೇಕ ಸಾಮಾಜಿಕ ಕಾರ್ಯಗಳೂ ಅವರಿಂದ ಆಗುತ್ತಿವೆ. ಪರಿಸರ ರಕ್ಷಣೆ ಮಾಡುವಂತೆ ಸಮಂತಾ ಅನೇಕ ಬಾರಿ ಕರೆಕೊಟ್ಟಿದ್ದಿದೆ.

ಸದ್ಗುರು ಅವರ ಇಶಾ ಫೌಂಡೇಷನ್ ಜತೆ ಸಮಂತಾ ಉತ್ತಮ ನಂಟು ಇಟ್ಟುಕೊಂಡಿದ್ದಾರೆ. ಜಲ ಹಾಗೂ ಕಾಡುಗಳ ರಕ್ಷಣೆಗೆ ಇಶಾ ಫೌಂಡೇಶನ್ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಸಮಂತಾ ಕೂಡ ಇದಕ್ಕೆ ಅನೇಕ ಬಾರಿ ಕೈ ಜೋಡಿಸಿದ್ದಿದೆ.

ಈಗ ಸಮಂತಾ ಅವರು ಫ್ರೀ ಹಗ್ ನೀಡಿದ್ದಾರೆ. ಹಾಗಾಂತ, ಯಾವುದೇ ಫ್ಯಾನ್ಸ್ಗೆ ಅಲ್ಲ. ಬದಲಿಗೆ ಮರಕ್ಕೆ. ಮರವನ್ನು ಅಪ್ಪಿಕೊಂಡಿರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದು, ‘ಫ್ರೀ ಹಗ್’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

ಸಮಂತಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಯಶೋಧಾ’ ಚಿತ್ರಕ್ಕಾಗಿ ಸಖತ್ ಆ್ಯಕ್ಷನ್ ಮೆರೆಯಲ್ಲಿದ್ದಾರೆ. ಇದಕ್ಕಾಗಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಆಗಮನವಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.