Sunny Leone: ಪುತ್ರಿಯ ಕೈಹಿಡಿದಿಲ್ಲ ಎಂಬ ಒಂದೇ ಕಾರಣಕ್ಕೆ ಟ್ರೋಲ್; ಸನ್ನಿಯ ಉತ್ತರ ಏನಿತ್ತು?
Sunny Leone Family: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಫೋಟೋ ಒಂದರಲ್ಲಿ ಪುತ್ರಿ ನಿಶಾಳ ಕೈ ಹಿಡಿದಿಲ್ಲ ಎಂಬ ಕಾರಣಕ್ಕೆ ಟ್ರೋಲ್ಗೆ ತುತ್ತಾಗಿದ್ದಾರೆ. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ಸನ್ನಿ, ‘‘ಮಕ್ಕಳನ್ನು ಎಷ್ಟು ಉತ್ತಮವಾಗಿ ಬೆಳೆಸುತ್ತಿದ್ದೇವೆ ಎನ್ನುವುದು ನಮಗೆ ತಿಳಿದಿದೆ’’ ಎಂದಿದ್ದಾರೆ. ಜತೆಗೆ ‘‘ಒಂದು ಫೋಟೋದಿಂದ ನಮ್ಮ ಪೋಷಕತನ ಅಳೆಯಬೇಡಿ’’ ಎಂದು ಟ್ರೋಲ್ಗಳಿಗೆ ಛಾಟಿ ಬೀಸಿದ್ದಾರೆ.