AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Leone: ಪುತ್ರಿಯ ಕೈಹಿಡಿದಿಲ್ಲ ಎಂಬ ಒಂದೇ ಕಾರಣಕ್ಕೆ ಟ್ರೋಲ್; ಸನ್ನಿಯ ಉತ್ತರ ಏನಿತ್ತು?

Sunny Leone Family: ಬಾಲಿವುಡ್​ ಬೆಡಗಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್​ ಫೋಟೋ ಒಂದರಲ್ಲಿ ಪುತ್ರಿ ನಿಶಾಳ ಕೈ ಹಿಡಿದಿಲ್ಲ ಎಂಬ ಕಾರಣಕ್ಕೆ ಟ್ರೋಲ್​ಗೆ ತುತ್ತಾಗಿದ್ದಾರೆ. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ಸನ್ನಿ, ‘‘ಮಕ್ಕಳನ್ನು ಎಷ್ಟು ಉತ್ತಮವಾಗಿ ಬೆಳೆಸುತ್ತಿದ್ದೇವೆ ಎನ್ನುವುದು ನಮಗೆ ತಿಳಿದಿದೆ’’ ಎಂದಿದ್ದಾರೆ. ಜತೆಗೆ ‘‘ಒಂದು ಫೋಟೋದಿಂದ ನಮ್ಮ ಪೋಷಕತನ ಅಳೆಯಬೇಡಿ’’ ಎಂದು ಟ್ರೋಲ್​ಗಳಿಗೆ ಛಾಟಿ ಬೀಸಿದ್ದಾರೆ.

shivaprasad.hs
|

Updated on:Mar 20, 2022 | 12:02 PM

Share
ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇದಕ್ಕೆ ಅವರ ಪತಿ ಡೇನಿಯಲ್ ವೆಬರ್ ಕೂಡ ಹೊರತಾಗಿಲ್ಲ. ಆದರೆ ಇತ್ತೀಚೆಗೆ ಫೋಟೋ ಒಂದನ್ನು ತೆಗೆದುಕೊಂಡು ಅದನ್ನು ಟ್ರೋಲ್ ಮಾಡಲಾಗಿದೆ. ಅಷ್ಟಕ್ಕೂ ಸನ್ನಿ ಮಾಡಿದ್ದೇನು ಅಂತೀರಾ? ಮುಂದೆ ಓದಿ.

1 / 5
ಡೇನಿಯಲ್ ಹಾಗೂ ಸನ್ನಿಗೆ ನಿಶಾ ಎಂಬ ದತ್ತುಪುತ್ರಿಯಿದ್ದಾಳೆ. ಜತೆಗೆ ಬಾಡಿಗೆ ತಾಯ್ತನದ ಮೂಲಕ ಅಶೆರ್ ಹಾಗೂ ನೋಹಾ ಎಂಬ ಮಕ್ಕಳನ್ನು ತಾರಾ ದಂಪತಿ ಪಡೆದಿದ್ದಾರೆ. ಆದರೆ ಇತ್ತೀಚಿನ ಫೋಟೋ ಒಂದರಲ್ಲಿ ಸನ್ನಿ ಹಾಗೂ ಡೇನಿಯಲ್ ನಿಶಾರ ಕೈ ಹಿಡಿದುಕೊಂಡಿರಲಿಲ್ಲ. ಬದಲಾಗಿ ಮತ್ತೀರ್ವರು ಮಕ್ಕಳ ಕೈಹಿಡಿದಿದ್ದರು. ನಿಶಾ ದತ್ತುಪುತ್ರಿಯಾಗಿದ್ದರಿಂದ ಅವರ ಕೈಹಿಡಿಯಲಾಗಿಲ್ಲ ಎಂದು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಸನ್ನಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

2 / 5
‘‘ಪೋಷಕರಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ಒಂದು ಫೋಟೋ ತಿಳಿಸುವುದಿಲ್ಲ. ಒಂದು ಫೋಟೋದಿಂದಲೇ ಎಲ್ಲವನ್ನೂ ಹೇಗೆ ಅಳೆಯುತ್ತೀರಿ? ಮಕ್ಕಳನ್ನು ನಾವು ಅದ್ಭುತವಾಗಿ ನೋಡಿಕೊಳ್ಳುತ್ತಿದ್ದೇವೆ. ಡೇನಿಯಲ್​ಗೆ ನಿಶಾ ಎಂದರೆ ಪ್ರಾಣ’’ ಎಂದು ಉತ್ತರಿಸಿದ್ದಾರೆ ಸನ್ನಿ.

3 / 5
Sunny Leone: ಪುತ್ರಿಯ ಕೈಹಿಡಿದಿಲ್ಲ ಎಂಬ ಒಂದೇ ಕಾರಣಕ್ಕೆ ಟ್ರೋಲ್; ಸನ್ನಿಯ ಉತ್ತರ ಏನಿತ್ತು?

‘‘ಸೋಷಿಯಲ್ ಮೀಡಿಯಾದಲ್ಲಿ ಅಂತಹ ಕಾಮೆಂಟ್​ಗಳನ್ನು ನಾನು ಓದುವುದಿಲ್ಲ’’ ಎಂದಿರುವ ಸನ್ನಿ, ಆದರೆ ಡೇನಿಯಲ್ ಓದುತ್ತಾರೆ ಮತ್ತು ಅಂತವುಗಳಿಂದ ಬೇಸರಗೊಳ್ಳುತ್ತಾರೆ ಎಂದಿದ್ದಾರೆ. ‘‘ಆದರೆ ಇದರಿಂದ ದುಃಖಿತರಾಗಬಾರದು ಎಂದು ನಾನು ಹೇಳುತ್ತಿರುತ್ತೇನೆ. ಕಾರಣ ಮಕ್ಕಳ ಬೆಳವಣಿಗೆಗೆ ನಾವು ಅತ್ಯುತ್ತಮ ವಾತಾವರಣವನ್ನು ಕಲ್ಪಿಸಿರುವುದು ನಮಗೆ ತಿಳಿದಿದೆ’’ ಎಂದು ಹೇಳಿದ್ದಾರೆ ಸನ್ನಿ ಲಿಯೋನ್.

4 / 5
Sunny Leone: ಪುತ್ರಿಯ ಕೈಹಿಡಿದಿಲ್ಲ ಎಂಬ ಒಂದೇ ಕಾರಣಕ್ಕೆ ಟ್ರೋಲ್; ಸನ್ನಿಯ ಉತ್ತರ ಏನಿತ್ತು?

ವೃತ್ತಿಯ ವಿಚಾರಕ್ಕೆ ಬಂದರೆ ಸನ್ನಿ ಲಿಯೋನ್ ‘ಅನಾಮಿಕ’ ಸೀರೀಸ್ ಮೂಲಕ ಒಟಿಟಿಗೆ ಪದಾರ್ಪಣೆ ಮಾಡಿದ್ದಾರೆ. ಇದಲ್ಲದೆ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.

5 / 5

Published On - 12:01 pm, Sun, 20 March 22