Updated on: Feb 11, 2024 | 10:48 PM
ನಟಿ ಸಮಂತಾ ಕಳೆದ ಕೆಲ ತಿಂಗಳಿನಿಂದಲೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಚಿತ್ರರಂಗದಿಂದ ದೂರ ಉಳಿದು ಬಿಟ್ಟಿದ್ದಾರೆ.
ಆರೋಗ್ಯ ಸಮಸ್ಯೆಯ ಕಾರಣ ತೀವ್ರ ಸಂಕಷ್ಟ ಅನುಭವಿಸಿದ್ದ ಸಮಂತಾ ಸಂಪೂರ್ಣವಾಗಿ ಗುಣವಾಗುವ ಉದ್ದೇಶದಿಂದ ಚಿತ್ರರಂಗದ ಕೆಲಸದಿಂದ ದೊಡ್ಡ ಬಿಡುವು ಪಡೆದಿದ್ದರು.
ಆರೋಗ್ಯ ಸುಧಾರಣೆಯ ಜೊತೆಗೆ ಗೆಳೆಯರು, ಗೆಳತಿಯರೊಡನೆ ಹಲವು ಕಡೆಗಳಿಗೆ ಪ್ರವಾಸ ಹೋಗಿದ್ದ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿದ್ದರು.
ಆದರೆ ಇದೀಗ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ಸಮಂತಾ ಕೊಟ್ಟಿದ್ದಾರೆ. ತಾವು ಆದಷ್ಟು ಬೇಗವೇ ಶೂಟಿಂಗ್ಗೆ ಮರಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಅಲ್ಲದೆ ತಾವು ತಮ್ಮ ಗೆಳೆಯರೊಟ್ಟಿಗೆ ಸೇರಿ ಆರೋಗ್ಯಕ್ಕೆ ಸಂಬಂಧಿಸಿದ ಪಾಡ್ಕಾಸ್ಟ್ ಒಂದನ್ನು ಸಹ ಮಾಡಿರುವುದಾಗಿ ಸಮಂತಾ ಹೇಳಿದ್ದಾರೆ. ಪಾಡ್ಕಾಸ್ಟ್ ಶೀಘ್ರವೇ ಬಿಡುಗಡೆ ಆಗಲಿದೆ.
ಸಮಂತಾ ನಟನೆಯಿಂದ ಬಿಡುವು ಪಡೆಯುವ ಮುನ್ನ ವರುಣ್ ಧವನ್ ಜೊತೆಗೆ ‘ಸಿಟಾಡೆಲ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದರು. ಅದು ಇನ್ನೂ ಬಿಡುಗಡೆ ಆಗಿಲ್ಲ.
ಹಿಂದಿಯ ಒಂದು ಸಿನಿಮಾ, ಇಂಗ್ಲೀಷ್ನ ಒಂದು ಸಿನಿಮಾವನ್ನು ಸಮಂತಾ ಒಪ್ಪಿಕೊಂಡಿದ್ದರು. ಬಹುಷಃ ಆ ಸಿನಿಮಾಗಳನ್ನು ಸಮಂತಾ ಮುಂದುವರೆಸುತ್ತಾರೆ ಎನ್ನಲಾಗುತ್ತಿದೆ.
ಸಮಂತಾ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತು.