ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟ ನಟಿ ಸಮಂತಾ
Samantha: ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿದ್ದ ಸಮಂತಾ ಕಳೆದ ಕೆಲ ತಿಂಗಳುಗಳಿಂದ ಚಿತ್ರರಂಗದಿಂದ ಬಿಡುವು ಪಡೆದಿದ್ದರು. ಇದೀಗ ತಾವು ಮತ್ತೆ ಶೀಘ್ರದಲ್ಲಿಯೇ ಶೂಟಿಂಗ್ಗೆ ತೆರಳುವುದಾಗಿ ಹೇಳಿಕೊಂಡಿದ್ದಾರೆ.
Updated on: Feb 11, 2024 | 10:48 PM

ನಟಿ ಸಮಂತಾ ಕಳೆದ ಕೆಲ ತಿಂಗಳಿನಿಂದಲೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಚಿತ್ರರಂಗದಿಂದ ದೂರ ಉಳಿದು ಬಿಟ್ಟಿದ್ದಾರೆ.

ಆರೋಗ್ಯ ಸಮಸ್ಯೆಯ ಕಾರಣ ತೀವ್ರ ಸಂಕಷ್ಟ ಅನುಭವಿಸಿದ್ದ ಸಮಂತಾ ಸಂಪೂರ್ಣವಾಗಿ ಗುಣವಾಗುವ ಉದ್ದೇಶದಿಂದ ಚಿತ್ರರಂಗದ ಕೆಲಸದಿಂದ ದೊಡ್ಡ ಬಿಡುವು ಪಡೆದಿದ್ದರು.

ಆರೋಗ್ಯ ಸುಧಾರಣೆಯ ಜೊತೆಗೆ ಗೆಳೆಯರು, ಗೆಳತಿಯರೊಡನೆ ಹಲವು ಕಡೆಗಳಿಗೆ ಪ್ರವಾಸ ಹೋಗಿದ್ದ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿದ್ದರು.

ಆದರೆ ಇದೀಗ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ಸಮಂತಾ ಕೊಟ್ಟಿದ್ದಾರೆ. ತಾವು ಆದಷ್ಟು ಬೇಗವೇ ಶೂಟಿಂಗ್ಗೆ ಮರಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಅಲ್ಲದೆ ತಾವು ತಮ್ಮ ಗೆಳೆಯರೊಟ್ಟಿಗೆ ಸೇರಿ ಆರೋಗ್ಯಕ್ಕೆ ಸಂಬಂಧಿಸಿದ ಪಾಡ್ಕಾಸ್ಟ್ ಒಂದನ್ನು ಸಹ ಮಾಡಿರುವುದಾಗಿ ಸಮಂತಾ ಹೇಳಿದ್ದಾರೆ. ಪಾಡ್ಕಾಸ್ಟ್ ಶೀಘ್ರವೇ ಬಿಡುಗಡೆ ಆಗಲಿದೆ.

ಸಮಂತಾ ನಟನೆಯಿಂದ ಬಿಡುವು ಪಡೆಯುವ ಮುನ್ನ ವರುಣ್ ಧವನ್ ಜೊತೆಗೆ ‘ಸಿಟಾಡೆಲ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದರು. ಅದು ಇನ್ನೂ ಬಿಡುಗಡೆ ಆಗಿಲ್ಲ.

ಹಿಂದಿಯ ಒಂದು ಸಿನಿಮಾ, ಇಂಗ್ಲೀಷ್ನ ಒಂದು ಸಿನಿಮಾವನ್ನು ಸಮಂತಾ ಒಪ್ಪಿಕೊಂಡಿದ್ದರು. ಬಹುಷಃ ಆ ಸಿನಿಮಾಗಳನ್ನು ಸಮಂತಾ ಮುಂದುವರೆಸುತ್ತಾರೆ ಎನ್ನಲಾಗುತ್ತಿದೆ.

ಸಮಂತಾ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತು.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




