- Kannada News Photo gallery Samantha Wore worth Lakh rupees Saree after She complete 12 Years in Cinema Industry
ಸಮಂತಾ ತೊಟ್ಟ ಈ ಸೀರೆಯ ಬೆಲೆ ಎಷ್ಟು ಲಕ್ಷ ಎಂದು ಗೆಸ್ ಮಾಡಿ; ಅಬ್ಬಬ್ಬಾ ಇಷ್ಟೊಂದಾ?
ಸಮಂತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಸೀರೆ ಉಟ್ಟ ಫೋಟೋ ಹಾಕಿ ಗಮನ ಸೆಳೆಯುತ್ತಿದ್ದಾರೆ. ಈ ಫೋಟೋದಲ್ಲಿ ಅವರ ಸೀರೆ ಹಾಗೂ ಕಿವಿಯ ಓಲೆ ಎಲ್ಲರ ಗಮನ ಸೆಳೆಯುತ್ತಿದೆ.
Updated on: Feb 27, 2022 | 3:24 PM

ನಟಿ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅವರು ಧರಿಸುವ ಡ್ರೆಸ್ ಎಲ್ಲರ ಗಮನ ಸೆಳೆಯುತ್ತದೆ. ಕೆಲವೊಮ್ಮೆ ಸೀರೆಯಲ್ಲೂ ಮಿಂಚುತ್ತಾರೆ ಸಮಂತಾ. ಈಗ ಅವರು ಪೋಸ್ಟ್ ಮಾಡಿರುವ ಹೊಸ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ಸಮಂತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಸೀರೆ ಉಟ್ಟ ಫೋಟೋ ಹಾಕಿ ಗಮನ ಸೆಳೆಯುತ್ತಿದ್ದಾರೆ. ಈ ಫೋಟೋದಲ್ಲಿ ಅವರ ಸೀರೆ ಹಾಗೂ ಕಿವಿಯ ಓಲೆ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬೆಲೆಯನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ. ಇದರ ಬೆಲೆ ಕೇಳಿ ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ.

ಈ ಸೀರೆಯ ಬೆಲೆ ಬರೋಬ್ಬರಿ 1,14,999 ರೂಪಾತಿ. ಸಮಂತಾರ ಸೀರೆ ಬೆಲೆ ಕೇಳಿ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕೆಲವರು ಸೀರೆಯನ್ನು ನೋಡಿ ಮೆಚ್ಚುಗೆ ಹೊರಹಾಕುತ್ತಿದ್ದಾರೆ.

ಸಮಂತಾ ಅವರು ಫೆಬ್ರವರಿ 26ರಂದು ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷ ಪೂರ್ಣಗೊಂಡಿದೆ. ಈ ವಿಶೇಷ ದಿನದಂದು ಅವರು ಕೆಲವು ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. ಇದಾದ ಬೆನ್ನಲ್ಲೇ ಅವರು ಈ ಸೀರೆಯ ಫೋಟೊ ಶೇರ್ ಮಾಡಿದ್ದಾರೆ.

ಸಮಂತಾ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿ ವೆಬ್ ಸೀರಿಸ್ ಕೂಡ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.




