ನಟಿ ಸಂಜನಾ ಬುರ್ಲಿಗೆ ತಾಳಿ ಕಟ್ಟಿ ಪ್ರೀತಿಯಿಂದ ಕೆನ್ನೆಗೆ ಮುತ್ತಿಟ್ಟ ಸಮರ್ಥ್
ನಟಿ ಸಂಜನಾ ಬುರ್ಲಿ ಅವರ ವಿವಾಹ ಕಾರ್ಯಗಳು ನೆರವೇರಿವೆ. ಖಾಸಗಿ ರೆಸಾರ್ಟ್ ಒಂದರಲ್ಲಿ ಇವರು ವಿವಾಹ ಆಗಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರು ಸಮರ್ಥ್ ಚೆನ್ನಗಿರಿ ಅವರನ್ನು ಮದುವೆ ಆಗಿದ್ದಾರೆ. ಈ ಸಂದರ್ಭದ ಫೋಟೋಗಳು ಗಮನ ಸೆಳೆದಿವೆ.
Updated on: Mar 27, 2026 | 9:42 AM

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದ ಸಂಜನಾ ಬುರ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮರ್ಥ್ ಅವರ ಜೊತೆ ಸಂಜನಾ ಮದುವೆ ನಡೆದಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಸಂಜನಾ ಬುರ್ಲಿ ಹಾಗೂ ಸಮರ್ಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಮಾರ್ಚ್ 25ರಂದು ಇವರ ಮದುವೆ ನಡೆದಿದೆ ಎಂದು ಹೇಳಲಾಗುತ್ತಾ ಇದೆ. ರೆಸಾರ್ಟ್ ಒಂದರಲ್ಲಿ ಮದುವೆ ನಡೆದಿದೆ.

ತಾಳಿ ಕಟ್ಟಿದ ಬಳಿಕ ಸಮರ್ಥ್ ಅವರು ಸಂಜನಾ ಬುರ್ಲಿ ಅವರಿಗೆ ಸಮರ್ಥ್ ಪ್ರೀತಿಯಿಂದ ಮುತ್ತು ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಳಿಕ ಸಂಜನಾ ಅವರು ಒಂದು ಸಣ್ಣ ಗ್ಯಾಪ್ ಪಡೆದರು. ಆ ಬಳಿಕ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸಿದರು. ಈ ಸೀರಿಯಲ್ ಅನ್ನೂ ಅವರು ಅರ್ಧಕ್ಕೆ ತೊರೆದರು.

ವಿವಾಹ ಆಗುವ ಉದ್ದೇಶದಿಂದಲೇ ಸಂಜನಾ ಬುರ್ಲಿ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿ ತೊರೆದರು ಎನ್ನಲಾಗಿದೆ. ಈ ಬಗ್ಗೆ ಅವರು ಇತ್ತೀಚೆಗೆ ಸ್ಪಷ್ಟನೆ ಕೊಟ್ಟರು. ಅವರು ಮತ್ತೆ ಹೊಸ ಧಾರಾವಾಹಿಯಲ್ಲಿ ನಟಿಸುತ್ತಾರಾ ಕಾದು ನೋಡಬೇಕಿದೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




