- Kannada News Photo gallery sandalwood actress shraddha srinath shines photogallery see shraddha pics
ಸ್ಯಾಂಡಲ್ವುಡ್ ನಟಿ ಶ್ರದ್ಧಾ ಬತ್ತಳಿಕೆಯಲ್ಲಿವೆ ವಿವಿಧ ಭಾಷೆಗಳ ಹಲವು ಸಿನಿಮಾಗಳು
Shraddha Srinath: ಸ್ಯಾಂಡಲ್ವುಡ್ ಮೂಲಕ ಗುರುತಿಸಿಕೊಂಡ ಬೆಡಗಿ ಶ್ರದ್ಧಾ ಶ್ರೀನಾಥ್ ಸದ್ಯ ಹಲವು ಭಾಷೆಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳ ನಾಲ್ಕು ಚಿತ್ರಗಳು ಶ್ರದ್ಧಾ ಬತ್ತಳಿಕೆಯಲ್ಲಿವೆ.
Updated on:Mar 03, 2022 | 4:13 PM

ಸ್ಯಾಂಡಲ್ವುಡ್ನಲ್ಲಿ ಮಿಂಚು ಹರಿಸಿದ ಪ್ರತಿಭೆ ಶ್ರದ್ಧಾ ಶ್ರೀನಾಥ್.

‘ಯು ಟರ್ನ್’ ಮೂಲಕ ಅಪಾರ ಖ್ಯಾತಿ ಗಳಿಸಿದ ನಟಿ, ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ.

ತಮಿಳಿನಲ್ಲಿ ಶ್ರದ್ಧಾಗೆ ಸಖತ್ ಡಿಮ್ಯಾಂಡ್ ಇದೆ. ಈಗಾಘಲೇ ಹಲವು ತಾರೆಯರೊಂದಿಗೆ ಶ್ರದ್ಧಾ ತೆರೆ ಹಂಚಿಕೊಂಡಿದ್ದಾರೆ.

ಪ್ರಸ್ತುತ ಕನ್ನಡ, ತೆಲುಗು, ತಮಿಳಿನಲ್ಲಿ ನಟಿ ಸಕ್ರಿಯರಾಗಿದ್ದಾರೆ.

ಕನ್ನಡದ ‘ಗೋಧ್ರಾ’ ಹಾಗೂ ‘ರುದ್ರಪ್ರಯಾಗ’ ಚಿತ್ರಗಳಿಗೆ ಶ್ರದ್ಧಾ ನಾಯಕಿ.

ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಲಿಯುಗಂ’ ಚಿತ್ರದಲ್ಲೂ ಶ್ರದ್ಧಾ ನಟಿಸುತ್ತಿದ್ದಾರೆ.

ಇವುಗಳಲ್ಲದೇ ಮತ್ತೊಂದು ತಮಿಳಿನ ಚಿತ್ರದಲ್ಲೂ ಶ್ರದ್ಧಾ ನಟಿಸುತ್ತಿದ್ದಾರೆ. ಸದ್ಯ ಅಧಿಕೃತ ಘೋಷಣೆಯಾಗಿರುವ ನಾಲ್ಕು ಚಿತ್ರಗಳಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ತೆರೆಕಂಡಿದ್ದ ಮಲಯಾಳಂ ‘ಆರಟ್ಟು’ವಿನಲ್ಲಿ ಶ್ರದ್ಧಾ ಪಾತ್ರ ಗಮನ ಸೆಳೆದಿತ್ತು.

2021ರಲ್ಲಿ ತೆರೆಗೆ ಬಂದಿದ್ದ ‘ಮಾರ’ ಹಾಗೂ ‘ಚಕ್ರ’ ಕೂಡ ಶ್ರದ್ಧಾಗೆ ಅಪಾರ ಮನ್ನಣೆ ತಂದುಕೊಟ್ಟಿತ್ತು.

ಶ್ರದ್ಧಾ ಶ್ರೀನಾಥ್
Published On - 3:55 pm, Thu, 3 March 22



















