ಸಂಜನಾ ಬುರ್ಲಿ ಮದುವೆಯ ಫೋಟೋಗಳು ಎಷ್ಟು ಸುಂದರವಾಗಿವೆ ನೋಡಿ

Updated on: Mar 28, 2026 | 11:52 AM

ಸಂಜನಾ ಬುರ್ಲಿ ವಿವಾಹದ ಫೋಟೋಗಳು ವೈರಲ್ ಆಗಿವೆ. ಸಮರ್ಥ್ ಚೆನ್ನಗಿರಿ ಅವರ ಫೋಟೋ ಹಾಗೂ ವಿಡಿಯೋಗಳು ಗಮನ ಸೆಳೆದಿವೆ. ಸಂಜನಾ ಅವರ ಫೋಟೋಗೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಈ ಫೋಟೋಗಳು ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ. ಸಂಜನಾ ಅವರು ಕಿರುತೆರೆ ನಟಿ. 

1 / 7
ಸಂನಾ ಬುರ್ಲಿ ಅವರು ಸಮರ್ಥ್ ಚೆನ್ನಗಿರಿ ಜೊತೆ ವಿವಾಹ ಆಗಿದ್ದಾರೆ. ಅವರ ವಿವಾಹದ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿವೆ. 

ಸಂನಾ ಬುರ್ಲಿ ಅವರು ಸಮರ್ಥ್ ಚೆನ್ನಗಿರಿ ಜೊತೆ ವಿವಾಹ ಆಗಿದ್ದಾರೆ. ಅವರ ವಿವಾಹದ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿವೆ. 

2 / 7

ಸಂಜನಾ ಬುರ್ಲಿ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ‘ಕಲರ್ಸ್ ಕನ್ನಡ’ಕ್ಕೆ ಬಂದರು. 

3 / 7

ಸಂಜನಾ ಬುರ್ಲಿ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ವಿವಾಹ ಕಾರಣದಿಂದ ಅವರು ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು. 

4 / 7

ಈಗ ಸಂಜನಾ ಬುರ್ಲಿ ಅವರು ಸಮರ್ಥ ಚೆನ್ನಗಿರಿ ಅವರನ್ನು ಮದುವೆ ಆಗಿದ್ದಾರೆ. ಅವರು ತಾಳಿ ಕಟ್ಟುವ ಸಂದರ್ಭದ ಫೋಟೋಗಳು ಗಮನ ಸೆಳೆದಿವೆ. ನಟಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. 

5 / 7

ಸಂಜನಾ ಮದುವೆ ಖಾಸಗಿ ರೆಸಾರ್ಟ್​ ಅಲ್ಲಿ ನಡೆದಿದೆ. ವಿವಾಹದ ಸಂದರ್ಭದಲ್ಲಿ ಸಮರ್ಥ್​-ಸಂಜನಾ ಖುಷಿ ಖುಷಿಯಿಂದ ಇದ್ದರು.

6 / 7

ವಿವಾಹ ಆದ ಬಳಿಕ ಸಮರ್ಥ್​ ಚೆನ್ನಗಿರಿ ಅವರು ಸಂಜನಾ ಬುರ್ಲಿ ಹಣೆಗೆ ತಿಲಕ ಇಟ್ಟರು. ಆ ಸಂದರ್ಭದ ಫೋಟೋ ಇದು.

7 / 7

ಸಂಜನಾ ಅವರಿಗೆ ಸಮರ್ಥ್ ಅವರು ಅರುಂಧತಿ ನಕ್ಷತ್ರ ತೋರಿಸಿದರು. ಈ ಫೋಟೋ ಗಮನ ಸೆಳೆದಿದೆ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us