- Kannada News Photo gallery Sayyeshaa Saigal Yuvarathnaa Heroine Celebrate 3rd year anniversary with Husband Arya
‘ಯುವರತ್ನ’ ನಾಯಕಿಗೆ ವಿವಾಹ ವಾರ್ಷಿಕೋತ್ಸವ; ಸಂತಸ ಹಂಚಿಕೊಂಡ ಸಾಯೇಶಾ
ಸಾಯೇಶಾ ಮೂಲತಃ ಮುಂಬೈನವರು. 1997ರ ಆಗಸ್ಟ್ 12ರಂದು ಸಾಯೇಶಾ ಜನಿಸಿದರು. 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್ ಸೈಗಲ್ ಪುತ್ರಿ ಸಾಯೇಶಾ.
Updated on: Mar 11, 2022 | 5:27 PM

ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿ ನಂತರ ‘ಯುವರತ್ನ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟವರು ನಟಿ ಸಾಯೇಶಾ ಸೈಗಲ್. ‘ಯುವರತ್ನ’ದಲ್ಲಿ ಸಿಕ್ಕ ಅವಕಾಶವನ್ನು ಸಾಯೇಶಾ ಸರಿಯಾಗಿ ಬಳಸಿಕೊಂಡಿದ್ದರು. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಅವರು ನಟ ಆರ್ಯ ಅವರನ್ನು ಮದುವೆ ಆಗಿ ಮೂರು ವರ್ಷ ಕಳೆದಿದೆ.

ಸಾಯೇಶಾ ಮೂಲತಃ ಮುಂಬೈನವರು. 1997ರ ಆಗಸ್ಟ್ 12ರಂದು ಸಾಯೇಶಾ ಜನಿಸಿದರು. 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್ ಸೈಗಲ್ ಪುತ್ರಿ ಸಾಯೇಶಾ. ಹೀಗಾಗಿ, ಇವರಿಗೆ ಸಹಜವಾಗಿಯೇ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.

2015ರಲ್ಲಿ ತೆರೆಗೆ ಬಂದ ತೆಲುಗಿನ ‘ಅಖಿಲ್’ ಸಿನಿಮಾ ಮೂಲಕ ಸಾಯೆಶಾ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಂತರ ಅಜಯ್ ದೇವಗನ್ ನಟನೆಯ ‘ಶಿವಾಯ್’ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಗಿಟ್ಟಿಸಿಕೊಂಡರು. ಈ ಮೂಲಕ ಬಾಲಿವುಡ್ನಲ್ಲೂ ಅವರು ಖಾತೆ ತೆರೆದರು. ನಂತರ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ಸಾಯೇಶಾ ಬಣ್ಣ ಹಚ್ಚಿದ್ದರು.

2018ರಲ್ಲಿ ತೆರೆಗೆ ಬಂದ ‘ಗಜನಿಕಾಂತ್’ ಸಿನಿಮಾದಲ್ಲಿ ತಮಿಳಿನ ಸ್ಟಾರ್ ಹೀರೋ ಆರ್ಯಗೆ ಜೋಡಿಯಾಗಿ ಸಾಯೇಶಾ ಕಾಣಿಸಿಕೊಂಡಿದ್ದರು. ನಂತರ ‘ಕಾಪನ್’, ‘ಟೆಡ್ಡಿ’ ಸಿನಿಮಾಗಳಲ್ಲೂ ಇಬ್ಬರೂ ಒಟ್ಟಾಗಿ ನಟಿಸಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಇವರ ಮಧ್ಯೆ ಸೆಟ್ನಲ್ಲೇ ಪ್ರೀತಿ ಮೂಡಿತು. ಇವರು ಕದ್ದುಮುಚ್ಚಿ ಓಡಾಡುತ್ತಿರುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ನಂತರ 2019ರ ಮಾರ್ಚ್ 10ರಂದು ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಈ ಮೂಲಕ 21ನೇ ವಯಸ್ಸಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಅವರಿಗೆ ಮಗು ಕೂಡ ಜನಿಸಿತ್ತು.




