- Kannada News Photo gallery SBI vs ICICI vs HDFC vs PPF FD Rates 2023 Comparison of Latest Fixed Deposit Interest Rate
FD Rates: ಎಫ್ಡಿ ಇಡುವ ಯೋಚನೆಯಲ್ಲಿದ್ದೀರಾ? ಯಾವ ಬ್ಯಾಂಕ್ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿರಂತರವಾಗಿ ರೆಪೊ ದರ (Repo Rate) ಹೆಚ್ಚಿಸುತ್ತಾ ಬಂದು 2022ರ ಮೇ ನಂತರ ಈವರೆಗೆ ಒಟ್ಟಾರೆಯಾಗಿ ಶೇ 2.25ರಷ್ಟು ಹೆಚ್ಚಳ ಮಾಡಿದೆ. ಹೀಗಾಗಿ ವಿವಿಧ ಬ್ಯಾಂಕ್ಗಳು ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿವೆ. ಎಸ್ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್ಗಳು ಸ್ಥಿರ ಠೇವಣಿಗೆ (FD) ನೀಡುವ ಬಡ್ಡಿ ದರ ವಿವರ ಇಲ್ಲಿದೆ.
Updated on:Feb 14, 2023 | 6:01 PM

ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ, ಪಿಪಿಎಫ್, ಎಸ್ಸಿಎಸ್ಎಸ್ ಯೋಜನೆಗಳು ಸ್ಥಿರ ಠೇವಣಿಗೆ (FD) ನೀಡುವ ಬಡ್ಡಿ ದರದ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಅಂಚೆ ಇಲಾಖೆ ತಿಂಗಳ ಆದಾಯ ಯೋಜನೆ (POMIS), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಠೇವಣಿ ಮಿತಿಯನ್ನು ಬಜೆಟ್ನಲ್ಲಿ ಶೇ 50ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ, ಪೂರ್ಣ ಪ್ರಮಾಣದ ಹೂಡಿಕೆ ಮಾಡಿದರೆ ತಮ್ಮ ಬಡ್ಡಿ ಆದಾಯವನ್ನು ಶೇ 100ರಷ್ಟು ಹೆಚ್ಚಿಸುವ ಅವಕಾಶವ ಹಿರಿಯ ನಾಗರಿಕರಿಗೆ ದೊರೆತಿದೆ.

SBI Amrit Kalash Check Interest Rate, Eligibility and All You Need to Know

ಎಚ್ಡಿಎಫ್ಸಿ ಬ್ಯಾಂಕ್ ವಿವಿಧ ಅವಧಿಯ ಠೇವಣಿಗಳಿಗೆ ಶೇ 3ರಿಂದ ಶೇ 7ರ ವರೆಗೆ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ವಿವಿಧ ಅವಧಿಯ ಠೇವಣಿಗಳಿಗೆ ಶೇ 3.5ರಿಂದ ಶೇ 7.75ರ ವರೆಗೆ ಬಡ್ಡಿ ನೀಡುತ್ತಿದೆ.

ಐಸಿಐಸಿಐ ಬ್ಯಾಂಕ್ ವಿವಿಧ ಅವಧಿಯ ಠೇವಣಿಗಳಿಗೆ ಶೇ 3ರಿಂದ ಶೇ 7ರ ವರೆಗೆ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ವಿವಿಧ ಅವಧಿಯ ಠೇವಣಿಗಳಿಗೆ ಶೇ 3.5ರಿಂದ ಶೇ 7.5ರ ವರೆಗೂ ಬಡ್ಡಿ ನೀಡುತ್ತಿದೆ.

ದೀರ್ಘಾವಧಿಯ ಜನಪ್ರಿಯ ಹೂಡಿಕೆಯಾಗಿರುವ ಪಿಪಿಎಫ್ ಶೇ 7.1ರ ಬಡ್ಡಿ ನೀಡುತ್ತಿದೆ. ಪಿಪಿಎಫ್ 15 ವರ್ಷಗಳ ಅವಧಿಯದ್ದಾಗಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಲ್ಲದವರಿಗೂ ಬ್ಯಾಂಕ್ ಪ್ಲಾಟಿನಾ ಎಫ್ಡಿಗಳ (Platina FDs) ಮೂಲಕ ಗರಿಷ್ಠ ಶೇ 8.20ರ ಬಡ್ಡಿ ನೀಡುತ್ತಿದೆ. ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇ 8.71ರ ವರೆಗೆ ಬಡ್ಡಿ ಘೋಷಿಸಿದೆ.
Published On - 5:58 pm, Tue, 14 February 23









