- Kannada News Photo gallery Several Celebrities participated In RamLalla Prana Pratishtapane here is the photos
ರಾಮ ಮಂದಿರದಲ್ಲಿ ಸೆಲೆಬ್ರಿಟಿಗಳ ದಂಡು; ಇಲ್ಲಿದೆ ಫೋಟೋ ಗ್ಯಾಲರಿ
ಸೆಲೆಬ್ರಿಟಿಗಳ ದಂಡು ರಾಮ ಮಂದಿರಕ್ಕೆ ತೆರಳಿದೆ. ಸಾವಿರಾರು ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇನ್ನು ಕೆಲವೇ ಹೊತ್ತಲ್ಲಿ ಕಾರ್ಯಕ್ರಮ ಆರಂಭ ಆಗಲಿದೆ. ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ ಇಲ್ಲಿದೆ.
Updated on: Jan 22, 2024 | 11:31 AM

ಸೆಲೆಬ್ರಿಟಿಗಳ ದಂಡು ರಾಮ ಮಂದಿರಕ್ಕೆ ತೆರಳಿದೆ. ಸಾವಿರಾರು ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇನ್ನು ಕೆಲವೇ ಹೊತ್ತಲ್ಲಿ ಕಾರ್ಯಕ್ರಮ ಆರಂಭ ಆಗಲಿದೆ. ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ ಇಲ್ಲಿದೆ.

ಕಂಗನಾ ರಣಾವತ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಅವರು ರಾಮ ಮಂದಿರದ ಎದುರು ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಅಲ್ಲಿರುವ ಹನುಮ ದೇವಾಲಯಕ್ಕೆ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಭೇಟಿ ನೀಡಿದ್ದಾರೆ. ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ, ಹನುಮನ ದರ್ಶನ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳ ದಂಡು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ನಿರ್ದೇಶಕ ರಾಜ್ಕುಮಾರ್ ಹಿರಾನಿ, ಆಲಿಯಾ ಭಟ್ ಮೊದಲಾದವರು ಇದ್ದಾರೆ.

ಆಲಿಯಾ ಭಟ್, ರಣಬೀರ್ ಕಪೂರ್ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆಯುತ್ತಿದೆ. ರೋಹಿತ್ ಶೆಟ್ಟಿ ಇವರಿಗೆ ಜೊತೆಯಾಗಿದ್ದಾರೆ.

ನಿಖಿಲ್ ಕುಮಾರ್ ಅವರು ತಂದೆ ಕುಮಾರಸ್ವಾಮಿ, ತಾತ ದೇವೇಗೌಡ ಜೊತೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಖಾಸಗಿ ಜೆಟ್ನಲ್ಲಿ ತೆಗೆಸಿಕೊಂಡ ಫೋಟೋ ಗಮನ ಸೆಳೆದಿದೆ.

ರಾಮ್ ಚರಣ್ ಹಾಗೂ ತಂದೆ ಚಿರಂಜೀವಿ ಅವರು ಖಾಸಗಿ ಜೆಟ್ನಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಈ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಟ್ರೆಡಿಷನಲ್ ಲುಕ್ನಲ್ಲಿ ಅವರು ಗಮನ ಸೆಳೆದಿದ್ದಾರೆ.




