ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ನಟನೆಯ ‘ಡಿಯರ್ ಜಿಂದಗಿ’ ಸಿನಿಮಾ ಯಶಸ್ಸು ಕಂಡಿತ್ತು. ಆಲಿಯಾ ಹಾಗೂ ಶಾರುಖ್ ಅದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದ ಸಿನಿಮಾ ಇದಾಗಿತ್ತು. ಈಗ ಈ ಜೋಡಿ ಮತ್ತೆ ಒಂದಾಗುತ್ತಿದೆ.
ಆಲಿಯಾ ಭಟ್, ಶೆಫಾಲಿ ಶಾ, ವಿಜಯ್ ವರ್ಮಾ, ರೋಶನ್ ಮ್ಯಾಥೀವ್ ಮೊದಲಾದವರು ನಡೆಸಿದ ‘ಡಾರ್ಲಿಂಗ್ಸ್’ ಸಿನಿಮಾ ಶೂಟಿಂಗ್ ಮುಗಿಸಿದೆ. ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ತೆರೆಗೆ ಬರೋಕೆ ರೆಡಿ ಆಗಿದೆ.
ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಹಾಗೂ ಆಲಿಯಾ ಭಟ್ ಅವರ ‘ಎಟರ್ನಲ್ ಸನ್ಶೈನ್’ ಪ್ರೊಡಕ್ಷನ್ ಹೌಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಸಿನಿಮಾವನ್ನು 80 ಕೋಟಿ ರೂಪಾಯಿಗೆ ನೆಟ್ಫ್ಲಿಕ್ಸ್ ಖರೀದಿಸಿದೆ ಎನ್ನಲಾಗುತ್ತಿದೆ.
ಡಾರ್ಕ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕೊವಿಡ್ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದೆ. ಸ್ಟಾರ್ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಈ ಕಾರಣಕ್ಕೆ ‘ಡಾರ್ಲಿಂಗ್ಸ್’ ಚಿತ್ರವನ್ನು ಒಟಿಟಿಯಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿತ್ತು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸಿನಿಮಾಗೆ ಒಳ್ಳೆಯ ಆಫರ್ ಸಿಕ್ಕಿದ್ದು, ಇದನ್ನು, ತಂಡ ಒಪ್ಪಿಕೊಂಡಿದೆ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಹಾಗೂ ‘ಆರ್ಆರ್ಆರ್’ ಚಿತ್ರ ತೆರೆಗೆ ಬರೋಕೆ ರೆಡಿ ಇದೆ.