ನಟ ಶಿವರಾಜ್ ಕುಮಾರ್ ಅವರು ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಕಳೆದ ಕೆಲವು ದಿನಗಳಿಂದಲೂ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು, ಇಂದು ಜ್ವರ ತುಸು ಹೆಚ್ಚಾದ ಕಾರಣ ಅವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು.
ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದರು. ತಜ್ಞ ವೈದ್ಯರು ಶಿವರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದರು. ಜೊತೆಗೆ ಸಾಮಾನ್ಯ ಆರೋಗ್ಯ ತಪಾಸಣೆ ಸಹ ಮಾಡಲಾಯ್ತು.
ಚಿಕಿತ್ಸೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಬಳಿಕ ಮಧ್ಯಾಹ್ನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವರಾಜ್ ಕುಮಾರ್.
61 ವರ್ಷ ವಯಸ್ಸಿನಲ್ಲಿಯೂ ಎನರ್ಜೆಟಿಕ್ ಆಗಿದ್ದಾರೆ ಶಿವರಾಜ್ ಕುಮಾರ್. ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುತ್ತಾರೆ.
ಶಿವರಾಜ್ ಕುಮಾರ್ ಅವರಿಗೆ ಕೆಲ ವರ್ಷದ ಹಿಂದೆ ಹೃದಯ ಸಂಬಂಧಿ ಸಣ್ಣ ಶಸ್ತ್ರಚಿಕಿತ್ಸೆಯೊಂದು ಸಹ ಆಗಿದೆ. ಹಾಗಿದ್ದರೂ ಸಹ ಈಗಲೂ ಯುವಕರಂತೆ ನರ್ತಿಸುತ್ತಾರೆ, ಫೈಟ್ ಮಾಡುತ್ತಾರೆ. ಯುವಕರನ್ನು ನಾಚಿಸುವ ಎನರ್ಜಿ ಶಿವಣ್ಣನದ್ದು.