ಶರಾವತಿ ಹಿನ್ನೀರಿನಲ್ಲಿ ಸಂಕ್ರಮಣದ ದಿನ ಸಿಗಂದೂರು ಚೌಡೇಶ್ವರಿ ಅದ್ಧೂರಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು, ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ

Sigandur Chowdeshwari Temple jathre: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಯ ಜಾತ್ರೆಯು ಇಂದು ಶನಿವಾರ ಅದ್ದೂರಿಯಿಂದ ನಡೆಯಿತು. ಪ್ರತಿ ವರ್ಷ ಸಂಕ್ರಮಣದ ದಿನದಂದು ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ. ಶರಾವತಿಯ ಹಿನ್ನೀರಿನಲ್ಲಿರುವ ಚೌಡೇಶ್ವರಿ ದೇವಿಯ ಅದ್ಧೂರಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.. ದೇವಿ ಜಾತ್ರೆ ಕುರಿತು ಒಂದು ಸಚಿತ್ರ ವರದಿ ಇಲ್ಲಿದೆ.

TV9 Web
| Updated By: ಸಾಧು ಶ್ರೀನಾಥ್​

Updated on: Jan 14, 2023 | 9:27 PM

ದ್ವೀಪದಲ್ಲಿ ಸಿಗಂದೂರು ಸಂಕ್ರಮಣ ಜಾತ್ರೆ ಹಿನ್ನೀರಿನಲ್ಲಿ ಸಂಭ್ರಮದ ಹಬ್ಬವಾಗಿದೆ. ಹೀಗೆ ಮಲೆನಾಡಿನ ಆರಾಧ್ಯ ದೈವ ಸಿಗಂದೂರು ದೇವಿಯ ಜಾತ್ರೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆಯುತ್ತಿದ್ದರು.

1 / 23
ಸಿಗಂದೂರು ದೇವಾಲಯದ ಇರುವುದು ಸೀಗೆ ಕಣಿವೆಯಲ್ಲಿ. ಸಹ್ಯಾದ್ರಿ ಪರ್ವತ ಶ್ರೇಣಿಯ ನಡುವೆ ಹರಿವ ಶರಾವತಿ ನದಿಯ ತಟದಲ್ಲಿ ವನದೇವತೆಯಾಗ ತಾಯಿ ಆರಾಧನೆ ಪಡುತ್ತಾ ಇದ್ದವಳು.

2 / 23
ಹೀಗೆ ಮೆಲೆನಾಡಿನ ಕಾಡಿನ ನಡುವೆ ದೇವಿಯ ಜಾತ್ರೆಯು ಅದ್ಧೂರಿ ಮತ್ತು ವಿಜೃಂಭಣೆಯಿಂದ ಕೂಡಿತ್ತು. ಜಾತ್ರೆಯಲ್ಲಿ ಭಾಗವಹಿಸಿದ ಭಕ್ತರು ಸಖತ್ ಖುಷಿಪಟ್ಟರು.

3 / 23
ಇಂದಿಗೂ ದೇವಿಯ ಶಕ್ತಿಗೆ ಭಕ್ತರು ತಲೆಬಾಗುತ್ತಾರೆ. ಇನ್ನೂ ಅನೇಕ ವ್ಯಾಜ್ಯಗಳು ದೇವಿಯ ಸನ್ನಿಧಾನದಲ್ಲಿ ತೀರ್ಮಾನಗಳಾಗಿವೆ.

4 / 23
ಮಲೆನಾಡಿನಲ್ಲಿ ಯಾವುದೇ ಕಳ್ಳತನ  ಅದರೂ ಅವರು ದೇವಿಗೆ ಬಂದು ಹರಕೆ ಹೊರುತ್ತಾರೆ. ಹೀಗೆ ಹರಕೆ ಬಳಿಕ ಕಳ್ಳತನ ಆಗಿರುವ ಗ್ರಾಮಸ್ಥರ ವಸ್ತಗಳು ವಾಪಸ್ ಸಿಗುತ್ತವೆ.

5 / 23
ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಗರ್ಭಗುಡಿಯ ದೇವಿಗೆ ದಿವ್ಯ ಜ್ಯೋತಿಯನ್ನ ಆರತಿ ಬೆಳಗುವ ಮೂಲಕ ಇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

6 / 23
ನೀರು ಕಡಿಮೆ ಇದ್ದ ಸಮಯದಲ್ಲಿ ಮೂಲ ಸ್ಥಾನದಲ್ಲಿ ದೇವಿಯ ದರ್ಶನ ಸಿಗುತ್ತಿತ್ತು.ಇದರ ಬಳಿಕ ದೇವಿಯನ್ನು ಸಿಗಂದೂರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಹೀಗೆ ಪ್ರತಿವರ್ಷ ಸಂಕ್ರಮಣದಂದು ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಮತ್ತು ಹವನಗಳು ನಡೆಯುತ್ತವೆ.

7 / 23
ವಿದ್ಯುತ್ ಯೋಜನೆಗಾಗಿ 1967 ರಲ್ಲಿ 76 ಹಳ್ಳಿಗಳು ಮುಳುಗಡೆಯಾದವು. ಅದರಲ್ಲಿ ಸಿಗಂದೂರಿನ ದೇವಿನ ಬನವಿದ್ದ ಜಾಗ ಸೀಗೆ ಕಣವಿ ಕೂಡಾ ಮುಳಗಡೆಯಾಗಿತ್ತು.

8 / 23
ಈಗಿನ ಧರ್ಮದರ್ಶಿ ಡಾ. ರಾಮಪ್ಪ ಅವರ ಪೂರ್ವಜರ ಮನೆ ದೇವತೆಯಾಗಿ ಗ್ರಾಮ ಬಹು ಸಂಖ್ಯಾತ ದೀವರ ಕುಟುಂಬಗಳ ಆರಾಧನಾ ದೇವತೆಯಾಗಿ ಪ್ರಸಿದ್ಧಿ ಪಡೆದುಕೊಂಡಿದೆ.

9 / 23
ಪ್ರತಿ ವರ್ಷ ಸಂಕ್ರಮಣ ಮತ್ತು ಅದರ ಮರುದಿನ ಎರಡು ದಿನ ಸಿಗಂದೂರು ದೇವಿಯ ಅದ್ದೂರಿ ಜಾತ್ರೆಯು ನಡೆಯುತ್ತದೆ.

10 / 23
ಹೀಗೆ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದಿದ್ದರು. ಶರಾವತಿಯ ಹಿನ್ನೀರಿನ ಲಾಂಚ್ ಮೂಲಕ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದರು. ಹೀಗೆ ಬಂದಂತಹ ಸಾವಿರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

11 / 23
ಮೆರವಣಿಗೆಯಲ್ಲಿ ಧರ್ಮದರ್ಶಿ ರಾಮಪ್ಪ, ಪುತ್ರ ರವಿ ಕುಮಾರ್ ಮತ್ತು ಕುಟುಂಬ ಪಾಲ್ಗೊಂಡಿತ್ತು. ಶಾಸಕ ಹಾಲಪ್ಪ,  ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ದೇವಿಯ ದರ್ಶನ ಪಡೆದರು.

12 / 23
ದರ್ಶನ ಪಡೆದ ಮಹಿಳೆಯರಿಗೆ ಸೀರೆ ರವಿಕೆಯ ಬಾಗಿನವನ್ನ ದೇಸ್ಥಾನದ ಕಮಿಟಿ ವತಿಯಿಂದ ನೀಡಲಾಯಿತು.  ಸುತ್ತಮುತ್ತದ ಗ್ರಾಮದ ಮಹಿಳೆಯರು ಕಳಶಕುಂಭ ಹೊತ್ತು ದೇವಿಯ ದರ್ಶನ ಪಡೆದಿರುವುದು ವಿಶೇಷವಾಗಿತ್ತು.

13 / 23
ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಗರ್ಭಗುಡಿಯ ದೇವಿಗೆ ದಿವ್ಯ ಜ್ಯೋತಿಯನ್ನ ಆರತಿ ಬೆಳಗುವಮೂಲಕ ಇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

14 / 23
ಡೊಳ್ಳು ಕುಣಿತ, ತಟ್ಟಿರಾಯನ ಕುಣಿತ, ಹೀಗೆ ಮೊದಲಾದ ಜಾನಪದ ಗೀತೆಗಳ ಮೂಲಕ ಮೆರವಣಿಗೆ  ನಡೆದುಬಂದಿತು.

15 / 23
ಶ್ರೀಧರ ಭಟ್ಟರಿಂದ ಅಭೂತಪೂರ್ವವಾಗಿ ಮಂತ್ರಘೋಷಗಳು ಮೊಳಗಿದವು.  ದಿವ್ಯ ಜ್ಯೋತಿಯನ್ನ ಅತಿಥಿಗಳಿಂದ ಮತ್ತು ಧರ್ಮಧರ್ಶಿಗಳಿಂದ ಜ್ಯೋತಿ ಬೆಳಗಿಸಲಾಯಿತು. 8. ಮೆರವಣಿಗೆಯಲ್ಲಿ ದಿವ್ಯಜ್ಯೋತಿಯನ್ನ ಹೊತ್ತುತರಲಾಯಿತು. ಈ ವೇಳೆ ಕುಂಭ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

16 / 23
ನಂತರ ಕ್ಷೇತ್ರಪಾಲಕ ಭೂತರಾಯನಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚೌಡೇಶ್ವರಿ ದೇವಿಯ ಮೂಲ ಜಾಗದಲ್ಲಿ ತಾವರೆ ಹೂವುಗಳಿಂದ ಅಲಂಕಾರ ಮಾಡಿ ನಂತರ  ಮಹಾಮಂಗಳಾರತಿ ನೆರವೇರಿಸಲಾಯಿತು.

17 / 23
ಅಚ್ಚುಕಟ್ಟಾದ ವ್ಯವಸ್ಥೆಯ ನಡುವೆ ಹೋಮ, ಹವನ, ವಿಶೇಷ ಪೂಜೆಗಳು ಜರುಗಿದವು.  ಸಿಗಂದೂರಿನ ಸೀಗೇಕಣಿವೆಯಲ್ಲಿಯಲ್ಲಿ ಚಂಡಿಕಾ ಹೋಮ,  ಭೂತರಾಯನ ಕ್ಷೇತ್ರಪಾಲಕನಿಗೆ ವಿಶೇಷ ಪೂಜೆ ಹಾಗೂ ಚೌಡೇಶ್ವರಿಯ ಜ್ಯೋತಿ ಹೊತ್ತು ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.

18 / 23
ಮಕರಣ ಸಂಕ್ರಮಣ ಪ್ರಯುಕ್ತ  ಸಿಗಂದೂರು ಚೌಡೇಶ್ವರಿಯ ಮೂಲಸ್ಥಳದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿತ್ತು.

19 / 23
ಶರಾವತಿಯ ಹಿನ್ನೀರಿನಲ್ಲಿರುವ ಚೌಡೇಶ್ವರಿ ದೇವಿಯ ಅದ್ಧೂರಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.. ದೇವಿ ಜಾತ್ರೆ ಕುರಿತು ಒಂದು ವರದಿ ಇಲ್ಲಿದೆ. (ವರದಿ: ಬಸವರಾಜ್ ಯರಗಣವಿ ಟಿವಿ 9 ಶಿವಮೊಗ್ಗ)

20 / 23
ಪ್ರತಿ ವರ್ಷ ಸಂಕ್ರಮಣದ ದಿನದಂದು ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ.

21 / 23
ಕಾಡಿನ ನಡುವೆ ಶರಾವತಿಯ ಹಿನ್ನೀರಿನ ದ್ವೀಪದಲ್ಲಿರುವ ವನದೇವತೆ ಸಿಗಂದೂರು ದೇವಿಯ ಅದ್ಧೂರಿ ಜಾತ್ರೆ ನೋಡಿ ಭಕ್ತರು ಕಣ್ಣು ತುಂಬಿಕೊಂಡರು. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನಲೆಯಲ್ಲಿ ಸರಳ ಜಾತ್ರೆ ನಡೆದಿತ್ತು. ಆದ್ರೆ ಈ ವರ್ಷ ಯಾವುದೇ ಕೊರೊನಾದ ಆತಂಕ ಭಯವಿಲ್ಲದೇ ಜಾತ್ರೆಗೆ ಭಕ್ತರು ಹರಿದುಬಂದಿದ್ದು ವಿಶೇಷವಾಗಿತ್ತು.

22 / 23
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಯ ಜಾತ್ರೆಯು (Sigandur Chowdeshwari Temple jathre) ಇಂದು ಶನಿವಾರ ಅದ್ದೂರಿಯಿಂದ ನಡೆಯಿತು.

23 / 23
Follow us
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು

ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು

ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್

2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ

ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!

ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ

ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ

ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ