
ಶಾಲಾ ಬಸ್ ಹರಿದು ಉರಗ ರಕ್ಷಕ ಮೋಯಿನ್(53) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸರ್ಜಾಪುರದ ಬೊಮ್ಮಸಂದ್ರದ ಬಳಿ ನಡೆದಿದೆ

ಹಾವು ಹಿಡಿಯಲು ಇಟ್ಟಂಗೂರಿಗೆ ತೆರಳುತ್ತಿದ್ದ ವೇಳೆ ಸರ್ಜಾಪುರದ ಬೊಮ್ಮಸಂದ್ರದ ಬಳಿ ದುರ್ಘಟನೆ ಸಂಭವಿಸಿದೆ.

ಸದಾಕಾಲ ಹಾವು ರಕ್ಷಣೆಯಲ್ಲಿ ತೊಡಗಿದ್ದ ಮೋಯಿನ್ಗೆ ಇಟ್ಟಂಗೂರು ಬಳಿ ಹಾವು ಬಂದಿದೆ ಎಂದು ಕರೆ ಬಂದಿತ್ತು.

ಹಿನ್ನೆಲೆಯಲ್ಲಿ ಹಾವು ಹಿಡಿಯಲು ಇಟ್ಟಂಗೂರು ಕಡೆ ಹೋಗುತ್ತಿದ್ದ. ಆದ್ರೆ, ಮಾರ್ಗ ಮಧ್ಯ ವಿಧಿಯಂತೆ ಬಂದ ಬಸ್ ಮೋಯಿನ್ನನ್ನು ಬಲಿಪಡೆದುಕೊಂಡಿದೆ.

ಸದಾಕಾಲ ಹಾವು ರಕ್ಷಣೆಯಲ್ಲಿ ತೊಡಗಿದ್ದ ಮೋಯಿನ್ ಪಾಲಿಗೆ ಶಾಲಾ ಬಸ್ ವಿಧಿಯಾಗಿ ಬಂದು ಜೀವ ತೆಗೆದುಕೊಂಡಿದೆ.

ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.