- Kannada News Photo gallery Soared flower, fruit And vegetable prices, Varamahalakshmi festival is a boon for farmers, Chikkaballapur News in Kannada
ಗಗನಕ್ಕೇರಿದ ಹೂ, ಹಣ್ಣು, ತರಕಾರಿ ಬೆಲೆ; ರೈತರಿಗೆ ವರವಾದ ವರಮಹಾಲಕ್ಷ್ಮಿ ಹಬ್ಬ
ವರಮಹಾಲಕ್ಷ್ಮಿ ಹಬ್ಬ ಬಂದ್ರೆ ಸಾಕು, ಹೂ ಹಣ್ಣು ಸೇರಿದಂತೆ ತರಕಾರಿ ಬೆಲೆ ಗಗನಕ್ಕೇರಿದೆ. ಇನ್ನು ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಹೂ, ಹಣ್ಣುಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ. ವರಮಹಾಲಕ್ಷ್ಮಿ ಹಬ್ಬ ರೈತರಿಗೆ ವರವಾದರೆ, ಗ್ರಾಹಕರಿಗೆ ಹೊರೆಯಾದಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
Updated on: Aug 15, 2024 | 6:24 PM

ವರಮಹಾಲಕ್ಷ್ಮಿ ಹಬ್ಬ ಬಂದ್ರೆ ಸಾಕು, ಹೂ ಹಣ್ಣು ಸೇರಿದಂತೆ ತರಕಾರಿ ಬೆಲೆ ಗಗನಕ್ಕೇರಿದೆ. ಇನ್ನು ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಹೂ, ಹಣ್ಣುಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ. ವರಮಹಾಲಕ್ಷ್ಮಿ ಹಬ್ಬ ರೈತರಿಗೆ ವರವಾದರೆ, ಗ್ರಾಹಕರಿಗೆ ಹೊರೆಯಾದಂತಾಗಿದೆ.

ವರಮಹಾಲಕ್ಷ್ಮಿಗೂ, ತರಹೇವಾರಿ ಕಲರ್ ಫುಲ್ ಹೂಗಳಿಗೂ ಅದೇನೋ ಒಂಥರಾ ನಂಟು, ವರಮಹಾಲಕ್ಷ್ಮಿ ಪೂಜೆಗೆ ಸೇವಂತಿ, ರೋಜ್ ಬಟನ್, ಚಾಕ್ಲೇಟ್ ಕನಕಾಂಬರ, ಕಾಕಡ ಸೇರಿದಂತೆ ಕಲರ್ ಫುಲ್ ಹೂಗಳು ಬೇಕೆ ಬೇಕು. ಇದ್ರಿಂದ ವರಮಹಾಲಕ್ಷ್ಮಿ ಹಬ್ಬಕ್ಕೆಂದೇ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತರೆಹೇವಾರಿ ಹೂಗಳನ್ನು ಬೆಳೆಯುತ್ತಾರೆ.

ಇನ್ನು ಈ ಹಬ್ಬದ ಪ್ರಯುಕ್ತ ರೈತರು ಬೆಳೆಯುವ ಹೂಗಳಿಗೆ ಕೆ.ಜಿ ಸೇವಂತಿ, ಕೆಜಿ ರೋಜ್ ಬೆಲೆ ಇನ್ನೂರು ರೂಪಾಯಿಯಾದರೆ, ಕೆಜಿ ಚೆಂಡು ಹೂ ಬೆಲೆ ನೂರು ರೂಪಾಯಿ, ಇತ್ತ ಕನಕಾಂಬರ, ಕಾಕಡ ಬೆಲೆ ಐನೂರು ರೂಪಾಯಿ. ಜೊತೆಗೆ ಸುಗಂಧ ರಾಜನ ಇನ್ನೂರು ರೂಪಾಯಿಗೆ ಮಾರಾಟವಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂಗಳಿಗೆ ಬೆಲೆ ಬಂದು ರೈತರಿಗೆ ಸಂತಸವಾದರೆ, ಇತ್ತ ಹಬ್ಬ ಮಾಡಲು ವರಮಹಾಲಕ್ಷ್ಮಿ ಭಕ್ತರು ಪರದಾಡುತಿದ್ದಾರೆ.

ಹೂ. ಹಣ್ಣು, ತರಕಾರಿ ಸೇರಿದಂತೆ ಯಾವುದೇ ವಸ್ತು ಕೊಂಡರೂ ಕೈ ಸುಡುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಹೂ ಹಣ್ಣು ತರಕಾರಿ ಬೆಲೆ ಏರಿಕೆಯಾಗಿರುವುದಕ್ಕೆ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಲಾಭ ಸಿಗುವುದರ ಮೂಲಕ ವರಮಹಾಲಕ್ಷ್ಮಿ ಆಶೀರ್ವಾದ ಮಾಡಿದ್ರೆ, ಇರುವ ಸ್ಥಿತಿಗತಿಯಲ್ಲಿ ವರಮಾಹಲಕ್ಷ್ಮಿ ಹಬ್ಬ ಮಾಡುವುದರ ಮೂಲಕ ವರಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ ಹೆಂಗೆಳೆಯರು.




