
ದಕ್ಷಿಣ ಭಾರತದಲ್ಲಿ ನಟಿ ಅಮಲಾ ಪೌಲ್ ಅವರಿಗೆ ಸಖತ್ ಬೇಡಿಕೆ ಇದೆ. ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸದ್ಯ ಹಲವು ಆಫರ್ಗಳು ಅವರ ಕೈಯಲ್ಲಿವೆ.

ಕಿಚ್ಚ ಸುದೀಪ್ ಜೊತೆ ‘ಹೆಬ್ಬುಲಿ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದ ಸಿನಿಪ್ರಿಯರಿಗೂ ಅಮಲಾ ಪೌಲ್ ಪರಿಚಿತರಾದರು. ಅವರಿಗೆ ಕರುನಾಡಿನಲ್ಲೂ ಅಭಿಮಾನಿಗಳು ಇದ್ದಾರೆ.

ಅಮಲಾ ಪೌಲ್ ಅವರದ್ದು ಬೋಲ್ಡ್ ವ್ಯಕ್ತಿತ್ವ. ನೇರ ನಡೆ-ನುಡಿಯ ಕಾರಣದಿಂದ ಅವರು ಗುರುತಿಸಿಕೊಂಡಿದ್ದಾರೆ. ಆಗಾಗ ಅವರು ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಗ್ಲಾಮರಸ್ ಡ್ರೆಸ್ ಧರಿಸಿ ಅಮಲಾ ಪೌಲ್ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಸ್ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ ಅಮಲಾ.

ಸೋಶಿಯಲ್ ಮೀಡಿಯಾದಲ್ಲಿ ಅಮಲಾ ಪೌಲ್ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 45 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.
Published On - 9:35 am, Mon, 19 September 22