Updated on:Sep 18, 2022 | 8:17 PM
ಮುಂಬರುವ T20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶಿ ಸರಣಿಗಳನ್ನು ಆಡುತ್ತಿದೆ. ಫಿಂಚ್ ಮತ್ತು ರೋಹಿತ್ ಪಡೆಗಳ ನಡುವಿನ ಮೂರು ಪಂದ್ಯಗಳ T20 ಸರಣಿಯು ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ. ಇಂದು ಮುಂಜಾನೆ ಭಾನುವಾರ, ಭಾರತ ತಂಡದ ಕ್ರಿಕೆಟಿಗರು ಮೊಹಾಲಿಯಲ್ಲಿ ಅಭ್ಯಾಸ ನಡೆಸಿದರು.
ಟೀಂ ಇಂಡಿಯಾ ಈ ಸರಣಿಯನ್ನು ಟಿ20 ವಿಶ್ವಕಪ್ನ ಪೂರ್ವ ತಯಾರಿಯಾಗಿ ಪರಿಗಣಿಸಿದ್ದು, ಇದಕ್ಕಾಗಿ ಮೆನ್ ಇನ್ ಬ್ಲೂ ತಂಡ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ನೆಟ್ ಸೆಷನ್‌ನಲ್ಲಿ ಕಾಣಿಸಿಕೊಂಡಿದ್ದು, ಚಹಲ್-ಹರ್ಷಲ್ ಅವರ ಎಸೆತಗಳಲ್ಲಿ ಅಭ್ಯಾಸ ಮಾಡಿದರು.
ಮೊಹಾಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಲೋಕೇಶ್ ರಾಹುಲ್ ತಮ್ಮದೊಂದಿಗೆ ಓಪನರ್ ಆಗಿರಲಿದ್ದಾರೆ ಎಂದಿದ್ದರು. ಹೀಗಾಗಿ ಈ ಸರಣಿ ರಾಹುಲ್ಗೂ ಮುಖ್ಯವಾಗಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ನೆಟ್ ಸೆಷನ್‌ನಲ್ಲಿ ಚೆಂಡನ್ನು ಮೈದಾನದ ಹೊರಗೆ ಕಳುಹಿಸುತ್ತಿರುವುದು ಕಾಣಬಹುದಾಗಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಅಷ್ಟಾಗಿ ಅಬ್ಬರಿಸದ ರೋಹಿತ್, ಏಷ್ಯಾಕಪ್-2022ರ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 12, 21, 28 ಮತ್ತು 72 ರನ್ ಗಳಿಸಿದ್ದರು.
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ- ಹಾಗೂ ಲಂಕಾ ವಿರುದ್ಧ ದುಬಾರಿಯಾಗಿ ತಂಡದ ಸೋಲಿಗೆ ಕಾರಣರಾಗಿದ್ದ ಭಾರತದ ಹಿರಿಯ ಸ್ಟಾರ್ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಮೊಹಾಲಿಯಲ್ಲಿ ಭರ್ಜರಿ ಅಭ್ಯಾಸ ನಡೆಸಿದರು
ಬೆನ್ನುನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಈ ಬಾರಿಯ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಬೂಮ್ ಬೂಮ್ ಬುಮ್ರಾ ತನ್ನನ್ನು ತಾನು ಪರೀಕ್ಷಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ T20I ಸರಣಿಯಲ್ಲಿ, ಭಾರತಕ್ಕೆ ಎರಡು ವಿಕೆಟ್‌ಕೀಪರ್-ಬ್ಯಾಟರ್ ಆಯ್ಕೆಗಳಿವೆ. ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್. ಮೆನ್ ಇನ್ ಬ್ಲೂ ಒಬ್ಬರನ್ನು ಆಡುವ XI ನಲ್ಲಿ ಇರಿಸುತ್ತಾರೋ ಅಥವಾ ಇಬ್ಬರನ್ನೂ ಇರಿಸಿಕೊಳ್ಳುತ್ತಾರೋ ಎಂಬುದನ್ನು ತಿಳಿಯಲು ಸೆಪ್ಟೆಂಬರ್ 20 ರ ಪಂದ್ಯವನ್ನು ನೋಡಬೇಕಾಗಿದೆ.
Published On - 8:17 pm, Sun, 18 September 22