- TV9 Kannada Kannada News Photos Sreeleela back to Tollywood after a small break acting with Ravi Teja
ಸಣ್ಣ ಬ್ರೇಕ್ ಬಳಿಕ ಮತ್ತೆ ಟಾಲಿವುಡ್ಗೆ ಶ್ರೀಲೀಲಾ ಎಂಟ್ರಿ, ಮತ್ತೆ ಸ್ಟಾರ್ ನಟನ ಜೊತೆ ಸಿನಿಮಾ
ಎಂಬಿಬಿಎಸ್ ವಿದ್ಯಾರ್ಥಿನಿ ಶ್ರೀಲೀಲಾ ಪರೀಕ್ಷೆಗಾಗಿ ಸಿನಿಮಾಗಳಿಂದ ಸಣ್ಣ ಬ್ರೇಕ್ ಪಡೆದಿದ್ದರು. ಈಗ ಮತ್ತೆ ಟಾಲಿವುಡ್ಗೆ ಪ್ರವೇಶ ಮಾಡಿರುವ ಶ್ರೀಲೀಲಾ, ಈ ಹಿಂದೆ ಹಿಟ್ ನೀಡಿದ್ದ ಸ್ಟಾರ್ ನಟನ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.
Updated on: May 30, 2024 | 6:29 PM

ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ಶ್ರೀಲೀಲಾ, ತೆಲುಗು ಚಿತ್ರರಂಗದ ಬೇಡಿಕೆಯ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀಲೀಲಾ, ತೆಲುಗಿನ ಬೇಡಿಕೆಯ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿಯೇ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಹೆಸರು ಪಡೆದುಕೊಂಡಿದ್ದಾರೆ.

ಈಗಾಗಲೇ ಪವನ್ ಕಲ್ಯಾಣ್, ಮಹೇಶ್ ಬಾಬು, ಬಾಲಕೃಷ್ಣ, ರವಿತೇಜ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ ನಟಿ ಶ್ರೀಲೀಲಾ.

ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಶ್ರೀಲೀಲಾ, ಪರೀಕ್ಷೆಗಳು ಇದ್ದ ಕಾರಣ ಚಿತ್ರರಂಗದಿಂದ ಸಣ್ಣ ಬ್ರೇಕ್ ಪಡೆದುಕೊಂಡಿದ್ದರು. ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ.

ಈಗ ಮತ್ತೆ ಹೊಸ ತೆಲುಗು ಸಿನಿಮಾ ಒಂದನ್ನು ಶ್ರೀಲೀಲಾ ಒಪ್ಪಿಕೊಂಡಿದ್ದು, ಶೀಘ್ರವೇ ಸಿನಿಮಾದ ಚಿತ್ರೀಕರಣವನ್ನು ಸಹ ಪ್ರಾರಂಭಿಸಲಿದ್ದಾರೆ.

‘ಧಮಾಕ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಮಾಸ್ ಮಹಾರಾಜ ರವಿತೇಜ ನಟನೆಯ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ.


ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



